ಕಲಬುರಗಿ: ‘ಎನ್ಎಸ್ಎಸ್ ಶಿಬಿರಗಳು ಹಸಿವಿನ ಮಹತ್ವ, ಸಮಯ ಪಾಲನೆ ಕುರಿತು ತಿಳಿಸಿಕೊಡುತ್ತವೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರುವ ಕಾರ್ಯಾಗಾರಗಳಾಗಿವೆ’ ಎಂದು ಸಹ ಪ್ರಾಧ್ಯಾಪಕ ಕರಿಗೂಳೇಶ್ವರ ಹೇಳಿದರು.

ತಾಲ್ಲೂಕಿನ ಔರಾದ (ಬಿ) ಗ್ರಾಮದ ಸ್ವಾಮಿ ಸಮರ್ಥ ದೇವಸ್ಥಾನದ ಆವರಣದಲ್ಲಿ ಎನ್.ವಿ ಪದವಿ ಮಹಾವಿದ್ಯಾಲಯ, ಐಕ್ಯೂಎಸಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ನಡೆದ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಇಂದು ಹೆಚ್ಚಿನ ಮಹಾವಿದ್ಯಾಲಯಗಳಲ್ಲಿ ಎನ್ಎಸ್ಎಸ್ ಘಟಕಗಳಿವೆ. ಆದರೆ, ಎನ್.ವಿ.ಕಾಲೇಜಿನ ಶಿಬಿರಾರ್ಥಿಗಳು ಅಳವಡಿಸಿಕೊಂಡಿರುವ ಸೇವಾ ಮನೋಭಾವ ಅನುಕರಣೀಯ ಹಾಗೂ ಶ್ಲಾಘನೀಯ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನೂತನ ವಿದ್ಯಾಲಯ ಸಂಸ್ಥೆಯ ಕಾಲೇಜು ಶೈಕ್ಷಣಿಕ ಮಂಡಳಿಯ ಸದಸ್ಯ ಸದಾಶಿವ ಆರ್. ಜಿಡಗೀಕರ್ ಮಾತನಾಡಿ, ‘ಶಿಬಿರಾರ್ಥಿಗಳು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇಂಥ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ನೆರವಾಗುತ್ತವೆ’ ಎಂದರು.

ಮೋಹಿನಿ ಸದಾಶಿವ ಜಿಡಗೀಕರ್ ಮಾತನಾಡಿದರು. ಎನ್ವಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಎನ್.ಎಸ್.ಎಸ್ ಅಧಿಕಾರಿ ದಯಾನಂದ ಎಂ.ಶಾಸ್ತ್ರಿ ವಂದಿಸಿದರು. ಪ್ರೊ.ಶ್ರೀಕಾಂತ ಪಂಡಿತ ಸ್ವಾಗತಿಸಿದರು. ಮಲ್ಲಿನಾಥ ಎಸ್.ತಳವಾರ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-34-1121697332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.