ಕಲಬುರಗಿ: ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 22 ಹಾಗೂ 23ರಂದು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ‘ನಿರ್ಮಾಣ-2026’ ಸಮಾರಂಭ ಆಯೋಜಿಸಲಾಗಿದೆ ಎಂದು ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಹೇಳಿದರು.

‘ಎರಡು ದಿನಗಳ ಕಾಲ ನಡೆಯಲಿರುವ ಉತ್ಸವವನ್ನು ಮೇ 22ರಂದು ಬೆಳಿಗ್ಗೆ 10 ಗಂಟೆಗೆ ಡಿಸಿಪಿ ಶಾಲೂ ಉದ್ಘಾಟಿಸುವರು. ನಾನು ಸಮಾರಂಭದ ಅಧ್ಯಕ್ಷತೆ ವಹಿಸುವೆ. ಕಾಲೇಜಿನ ಹಳೇ ವಿದ್ಯಾರ್ಥಿಯೂ ಆದ ಇನ್ಫೈನ್ಆನ್ ಟೆಕ್ನಾಲಜಿಸ್ ಕಂಪನಿಯ ಹಿರಿಯ ನಿರ್ದೇಶಕ ಪ್ರಕಾಶ ಬಾಲಸುಬ್ರಮಣ್ಯಂ ಅಧ್ಯಕ್ಷತೆ ವಹಿಸುವರು’ ಎಂದು ನಗರದಲ್ಲಿ ಪಿಡಿಎ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಉತ್ಸವದ ಅಂಗವಾಗಿ ಮೇ 22ರಂದು ಬೆಳಿಗ್ಗೆ 6.15ರಿಂದ 8 ಗಂಟೆ ತನಕ ಮ್ಯಾರಾಥಾನ್ ಓಟ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಉತ್ಸವದ ಉದ್ಘಾಟನೆ ಜರುಗಲಿದೆ. ಬಳಿಕ ಹ್ಯಾಕಾಥಾನ್ ಸೇರಿದಂತೆ ತಾಂತ್ರಿಕ ಸ್ಪರ್ಧಾ ಚಟುವಟಿಕೆಗಳು ನಡೆಯಲಿವೆ. ಮಧ್ಯಾಹ್ನ 2.30ರಿಂದ ಮಾರ್ನಿಂಗ್ ಡಿಜೆ, ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

‘ಮೇ 23ರಂದು ಬೆಳಿಗ್ಗೆ 10.30ರಿಂದ ಎಥ್ನಿಕ್ ವಾಕ್, ಮಿನಿ ಡಿಜೆ ನಡೆಯಲಿದೆ. ಬಳಿಕ ಆಟೊ ಎಕ್ಸಪೊ ಜರುಗಲಿದೆ. ಮಧ್ಯಾಹ್ನ 12ರಿಂದ ಬ್ಯಾಂಜೋ, ನಾಸಿಕ್ ಡೋಲ್ ವಾದನ ನಡೆಯಲಿದೆ. ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ರ್ಯಾಂಪ್ ವಾಕ್, ಡಿಜೆ ಕಾರ್ಯಕ್ರಮಗಳು ಇರಲಿವೆ’ ಎಂದರು.

‘2025–26ನೇ ಸಾಲಿನಲ್ಲಿ ಈತನಕ 474 ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಿದೆ’ ಎಂದ ನಮೋಶಿ, ‘ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್ನ ಪದವಿ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಡಾಟಾ ಸೈನ್ಸ್ ಕೋರ್ಸ್ ಪರಿಚಯಿಸಲಾಗಿದೆ. ಅದಕ್ಕೆ 60 ಸೀಟುಗಳು ಇರಲಿವೆ. ಹಳೆಯ ವಿಭಾಗವಾದ ಎಲೆಕ್ರ್ಟಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಈ ಸಲ ಹೆಚ್ಚುವರಿಯಾಗಿ 60 ಸೀಟು ಹೆಚ್ಚಿಸಲು ಅನುಮತಿ ಸಿಕ್ಕಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಿಡಿಎ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಸದಸ್ಯ ಡಾ.ಅನಿಲ್ ಪಟ್ಟಣ, ಡಾ.ಶರಣಬಸಪ್ಪ ಹರವಾಳ, ಪ್ರಾಚಾರ್ಯ ಎಸ್.ಆರ್.ಪಾಟೀಲ, ಉಪಪ್ರಾಚಾರ್ಯರಾದ ಎಸ್.ಆರ್.ಹೊಟ್ಟಿ ಮತ್ತು ಭಾರತಿ ಹರಸೂರ, ಉತ್ಸವದ ಸಂಚಾಲಕ ಪ್ರೊ.ಜಯಪ್ರಕಾಶ ಎ.ಕೆ. ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-34-1037125742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.