ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ ದತ್ತಾತ್ರಿ ಸುಭಾಷ ಅವರ ಮಗನ ಶೈಕ್ಷಣಿಕೆ ವೆಚ್ಚವನ್ನು ಭರಿಸಲು ಕಲಬುರಗಿಯ ಡಿವೈನ್ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಕಡಗಂಚಿಯ ಕಾರ್ಮೆಲ್ ಜ್ಯೋತಿ ಚಾರಿಟಬಲ್ ಟ್ರಸ್ಟ್ ಮುಂದಾಗಿವೆ.

ಶಿಕ್ಷಾ ಬಂದಿ ದತ್ತಾತ್ರಿ ಆರ್ಥಿಕವಾಗಿ ದುರ್ಬಲರಾದ ಕಾರಣ ತನ್ನ ಮಗನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ (ಪ್ಯಾರಾ ಮೆಡಿಕಲ್ ಕೋರ್ಸ್) ಕಾಲೇಜಿನ ವೆಚ್ಚವನ್ನು ಭರಿಸಲು ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾರಾಗೃಹದ ಪ್ರಭಾರ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಅವರು ಡಿವೈನ್ ಸ್ಕೂಲ್ ಆಫ್ ನರ್ಸಿಂಗ್ ಸಂಸ್ಥಾಪಕ ಡಾ.ಕಿರಣ್ ಜಾರ್ಜ್ ಹಾಗೂ ಕಡಗಂಚಿಯ ಕಾರ್ಮೆಲ್ ಜ್ಯೋತಿ ಚಾರಿಟಬಲ್ ಟ್ರಸ್ಟ್ ಸಂಸ್ಥೆಯವರನ್ನು ಸಂಪರ್ಕಿಸಿ, ಶಿಕ್ಷಾ ಬಂದಿಯ ಮಗನ 3 ವರ್ಷದ ಶೈಕ್ಷಣಿಕ ವೆಚ್ಚವನ್ನು ಭರಿಸಲು ಕೋರಿದ್ದರು. ಅದರಂತೆ ಅವರು ಮೊದಲನೇ ವರ್ಷದ ವಿದ್ಯಾಭ್ಯಾಸದ ವೆಚ್ಚಕ್ಕಾಗಿ ಬುಧವಾರ ಚೆಕ್ ನೀಡಿದರು.

‘ಆರ್ಥಿಕವಾಗಿ ದುರ್ಬಲರಾದ ಶಿಕ್ಷಾ ಬಂದಿಯ ಮಗನ ವಿದ್ಯಾಭ್ಯಾಸಕ್ಕಾಗಿ ನೆರವು ನೀಡಿರುವುದು ಮಾನವೀಯ ಮಾದರಿ ಕಾರ್ಯ’ ಎಂದು ಪ್ರಭಾರ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಶ್ಲಾಘಿಸಿದರು.

ಫಾದರ್ ಮಿರಿಂಡಾ, ಫಾದರ್ ಮಾಕ್ಸಿಮ್, ಕಿರಣ, ಕಾರಾಗೃಹದ ಸಹಾಯಕ ಅಧೀಕ್ಷಕ ಬಿ.ಸುರೇಶ್, ಜೈಲರ್ಗಳಾದ ಸಾಗರ ಪಾಟೀಲ, ಶ್ರೀಮಂತಗೌಡ ಪಾಟೀಲ, ಶಿಕ್ಷಕ ನಾಗರಾಜ ಮೂಲಗೆ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-34-19538834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.