ಕಲಬುರಗಿ: ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಮೂಡಿಸಲು ಜಿಲ್ಲಾ ವಿಜ್ಞಾನ ಕೇಂದ್ರದಿಂದ ಏಪ್ರಿಲ್ 13ರಿಂದ ಮೇ 9ರವರೆಗೆ ಸಮಗ್ರ ಬೇಸಿಗೆ ವಿಜ್ಞಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಏ.13ರಿಂದ ಮೇ 9ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಪ್ರಾಥಮಿಕ, ಹಿರಿಯ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರದ ವಿಜ್ಞಾನ ತರಬೇತಿಗಳು ನಡೆಯಲಿವೆ.

ಇದರಲ್ಲಿ ಏಪ್ರಿಲ್ 13ರಿಂದ 18ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2ರಿಂದ ಸಂಜೆ 4.30 ಗಂಟೆಯವರೆಗೆ ವರ್ಣರಂಜಿತ ರಸಾಯನ ವಿಜ್ಞಾನ ಕುರಿತ ತರಗತಿಗಳು ಜರುಗಲಿವೆ.

ಏಪ್ರಿಲ್ 20ರಿಂದ 25ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಧ್ಯಾಹ್ನ 2ರಿಂದ ಸಂಜೆ 4.30ಯವರೆಗೆ ಜೀವಶಾಸ್ತ್ರ ತರಗತಿಗಳು ನಡೆಯಲಿವೆ. ಏಪ್ರಿಲ್ 27ರಿಂದ ಮೇ 2ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸೃಜನಾತ್ಮಕ ಗಣಿತದ ಬಗ್ಗೆ ತರಗತಿಗಳು ಜರುಗಲಿವೆ.

ಅದರಂತೆ, ಏಪ್ರಿಲ್ 27ರಿಂದ ನಾಲ್ಕರಿಂದ ಏಳನೇ ತರಗತಿ ಓದುತ್ತಿರುವ ಮಕ್ಕಳಿಗೆ ‘ಸೃಜನಶೀಲತೆಯೊಂದಿಗೆ ವಿಜ್ಞಾನವನ್ನು ಅನ್ವೇಷಿಸುವುದು’ ತರಗತಿಗಳು ನಡೆಯಲಿದೆ. ಅದರಲ್ಲಿ ಏಪ್ರಿಲ್ 27ರಿಂದ ಮೇ 2ರವರೆಗೆ ಮೊದಲ ಬ್ಯಾಚ್ ಮತ್ತು ಮೇ 4ರಿಂದ 9ವರೆಗೆ ಎರಡನೇ ಬ್ಯಾಚ್ ನಡೆಯಲಿದೆ ಹಾಗೂ ಪ್ರತಿ ಬ್ಯಾಚ್ಗೆ ₹1 ಸಾವಿರ ಶುಲ್ಕ ಇರುತ್ತದೆ.

ಪ್ರತಿ ಬ್ಯಾಚ್ಗೆ ಕೇವಲ 30 ವಿದ್ಯಾರ್ಥಿಗಳಿಗೆ ಮಾತ್ರ ನೋಂದಣಿ ಸೀಮಿತಗೊಳಿಸಲಾಗಿದೆ. ಶಿಬಿರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಮಾಹಿತಿಗೆ ಮೊ. 9788078048 ಸಂಪರ್ಕಿಸಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-34-109774176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.