ಕಲಬುರಗಿ: ಅಡ್ಡ ಏನಾದರೂ ಬಂದರೆ ತಿರುವು ತೆಗೆದುಕೊಳ್ಳುವ ಸ್ವಯಂ ಚಾಲಿತ ಸೆನ್ಸಾರ್ ಕಾರು, ಸ್ವಯಂ ಚಾಲಿತ ನೀರು ಪೂರಣ ಯಂತ್ರ, ಡಿಎನ್ಎ ರಚನೆ, ಮಾಲಿನ್ಯ ನಿಯಂತ್ರಣ, ಮಳೆ ನೀರು ಕೊಯ್ಲು...

ಇದು ಶರಣಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನೋತ್ಸವ ‘ಅನ್ವೇಷಣಾ–2026’ದ ಇಣುಕು ನೋಟ.

ವಿವಿಧ ವಿಭಾಗಗಳಲ್ಲಿ ವಿಧ್ಯಾರ್ಥಿಗಳು ಬಹಳ ಆಸ್ಥೆಯಿಂದ ತಾವು ತಯಾರಿಸಿದ್ದ ಮಾದರಿಗಳನ್ನು ಪ್ರದರ್ಶಿಸಿದರು. ಸ್ವಯಂ ಚಾಲಿತ ಸೆನ್ಸಾರ್ ಕಾರು ಅತಿಥಿಗಳಷ್ಟೇ ಅಲ್ಲದೆ ಬೇರೆ ವಿಭಾಗಗಳ ವಿದ್ಯಾರ್ಥಿಗಳ ಗಮನ ಸೆಳೆಯಿತು. ಮಾದರಿ ಬಗ್ಗೆ ವಿದ್ಯಾರ್ಥಿಗಳ ವಿವರಣೆಯನ್ನು ಗಣ್ಯರು ಆಸಕ್ತಿ, ಅಷ್ಟೇ ತಾಳ್ಮೆಯಿಂದ ಕೇಳಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿ ಮಾದರಿಯ ಪಕ್ಕದಲ್ಲೂ ಅದರ ವಿವರಣೆಯನ್ನು ಅಂದವಾಗಿ ಬರೆದು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗಿತ್ತು. ಕನ್ನಡ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ್ದ ಅನುಭವ ಮಂಟಪ, ಹಂಪಿ ದೇಗುಲಗಳ ಪ್ರತಿಕೃತಿಗಳು ಎಲ್ಲರ ಗಮನ ಸೆಳೆದವು.

‘ಆಯಾ ವಿಭಾಗದ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅವರ ಆಸಕ್ತಿಯ ಮಾದರಿಗಳನ್ನು ತಯಾರಿಸಿದ್ದಾರೆ. ಕೆಲವರು ಹೆಚ್ಚು ಸಮಯ ತೆಗೆದುಕೊಂಡರೂ ಉತ್ತಮ ಮಾಡೆಲ್ಗಳನ್ನು ಮಾಡಿದ್ದಾರೆ. ಮಕ್ಕಳ ಪ್ರತಿಭೆ ತರಗತಿ ಕೋಣೆಯಲ್ಲೇ ಮುಗಿಯಬಾರದು’ ಎಂದು ಶಿಕ್ಷಕರೊಬ್ಬರು ಹೇಳಿದರು.

ಇದಕ್ಕೂ ಮುನ್ನ ನಡೆದ ವಿಜ್ಞಾನೋತ್ಸವ ‘ಅನ್ವೇಷಣಾ-2026’ ವೇದಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಗುಲಬರ್ಗಾ ವಿಶ್ವ ವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಕೆಳಮನಿ ಚಂದ್ರಶೇಖರ, ‘ಏನೋ ಮಾಡಲು ಹೋದಾಗ ಬೇರೆ ಏನೋ ಆಗುತ್ತದೆ. ಆದರೆ ಗುರಿ ಇಟ್ಟುಕೊಂಡು ಮಾಡುವ ಸಂಶೋಧನೆಗಳೇ ಬೇರೆ’ ಎಂದು ಹೇಳಿದರು.

ರೋಗನಿರೋಧಕ ಸಂಶೋಧನೆ, ಪೆನ್ಸಿಲಿನ್, ಮೈಕ್ರೊವೇವ್ ಒವನ್, ಪೋಸ್ಟ್ ಇಟ್ ನೋಟ್ಸ್(ಸ್ಟಿಕ್ಕಿ ನೋಟ್ಸ್), ಎಕ್ಸ್ ರೇ, ಪೇಸ್ ಮೇಕರ್, ಬ್ಲಡ್ ಥಿನ್ನರ್... ನಂತಹ ಹಲವಾರು ಆಕಸ್ಮಿಕ ಅನ್ವೇಷಣೆಗಳನ್ನು ಪಿಪಿಟಿ ಮೂಲಕ ವಿವರಿಸಿದರು.

ವಿದ್ಯಾಭಾರತಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಿದ ಸಿಯುಕೆಯ ಪ್ರೊ.ಮಲ್ಲಿಕಾರ್ಜುನ ಹೂಗಾರ ಅವರು, ಆ ಸಂಸ್ಥೆಯ ವ್ಯಾಪ್ತಿ, ಕಾರ್ಯ, ಉದ್ದೇಶ, ಅಂಗಸಂಸ್ಥೆಗಳ ಬಗ್ಗೆ ವಿವರಿಸಿದರು. ದೇಶದಲ್ಲಿರುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ರಡ್ಡಿ ಮಾತನಾಡಿದರು. ಸಂಯೋಜಕಿ ಲತಾದೇವಿ ಕೆ., ಐಕ್ಯೂಎಸಿ ಸಂಯೋಜಕ ಪ್ರದೀಪಕುಮಾರ ಡಿ. ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-34-635089084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.