ಕಲಬುರಗಿ: ‘ಕೌಶಲಗಳು ಭಾರತದ ಸಂಸ್ಕೃತಿಯ ಮೂಲದಲ್ಲಿ ನೆಲೆಗೊಂಡಿವೆ. ನೈತಿಕ ಮೌಲ್ಯಗಳಿಲ್ಲದ ಕೌಶಲಕ್ಕೆ ಯಾವುದೇ ಮಹತ್ವವಿಲ್ಲ’ ಎಂದು ನ್ಯಾಯಮೂರ್ತಿ ಸಿ.ಎಂ.ಜೋಶಿ ಹೇಳಿದರು.

ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಾರ್ಷಿಕ ಸಾಂಸ್ಕೃತಿಕ, ಕ್ರೀಡಾ ಮತ್ತು ನವೀನತಾ ಉತ್ಸವ ‘ಅಂಕುರ್–2026’ದಲ್ಲಿ ಅವರು ಮಾತನಾಡಿದರು.

‘ದೇಶದ ಯುವ ನಾಯಕರಾಗಿರುವ ವಿದ್ಯಾರ್ಥಿಗಳಿಗೆ ಸೃಜನಶೀಲತೆ ಅಗತ್ಯ. ಸೃಜನಶೀಲತೆ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ವೃತ್ತಿಯನ್ನು ರೂಪಿಸುತ್ತದೆ. ಭಾರತದ ಜನಸಂಖ್ಯೆ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸ್ಕೃತಿ, ನಾಯಕತ್ವ ಮತ್ತು ಡಿಜಿಟಲ್ ವೇದಿಕೆಗಳು ವಿಶ್ವವನ್ನು ಮುನ್ನಡೆಸುವ ಶಕ್ತಿಗಳು. ನಮ್ಮ ದೇಶದಲ್ಲಿ ಪ್ರತಿಭಾವಂತರಿದ್ದಾರೆ. ಆದರೆ, ನಾವು ಆ ಪ್ರತಿಭೆಯನ್ನು ಸಮನ್ವಯಗೊಳಿಸಬೇಕು’ ಎಂದರು.

ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ‘ವಿಕಸಿತ ಭಾರತ–2047 ಸಾಧನೆಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸುತ್ತಾರೆ. ಸಿಯುಕೆ ಒಂದು ‘ಮಿನಿ ಇಂಡಿಯಾ’ ಆಗಿದೆ. ಇಲ್ಲಿ ವಿವಿಧ ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯತೆ ಇದೆ. ಪ್ರತಿಭಾವಂತ ವಿದ್ಯಾರ್ಥಿಗಳ ಮೂಲಕ ಸಿಯುಕೆ ವಿಕಸಿತ ಭಾರತಕ್ಕೆ ಕೊಡುಗೆ ನೀಡುತ್ತಿದೆ’ ಎಂದರು.

ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ.ಬಸವರಾಜ ಕುಬಕಡ್ಡಿ ಮಾತನಾಡಿ, ‘ಅಂಕುರ್ ಉತ್ಸವವು ವಿದ್ಯಾರ್ಥಿಗಳ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿ, ಅವರ ಕೌಶಲ ಮತ್ತು ಅವಕಾಶಗಳನ್ನು ಅಭಿವೃದ್ಧಿಪಡಿಸುತ್ತದೆ. ಇದು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ’ ಎಂದರು.

ಬಕ್ಕಪ್ರಭು ಅವರು ‘ಭಾರತೀಯ ಆರ್ಥಿಕತೆಯ ಮೇಲೆ ಕೃತಕ ಬುದ್ಧಿಮತ್ತೆ’ ಆಧಾರಿತ ಸಂಶೋಧನೆಗಾಗಿ ‘ರಿಸರ್ಚ್ ಇನೋವೇಶನ್’ ಪ್ರಶಸ್ತಿಯನ್ನು ಪಡೆದರು. ಮಾಸ್ಟರ್ಸ್ ಮತ್ತು ಪದವಿ ವಿಭಾಗದಲ್ಲಿ ಸಾವ್ಲಿ ಗುಪ್ತಾ ಮತ್ತು ಅನುರಾಗ್ ಜಿ. ಅವರು ಭಾರತೀಯ ಮಾನಸಿಕ ಆರೋಗ್ಯಕ್ಕೆ ನೀಡಿದ ಕೊಡುಗೆಗಾಗಿ ಪ್ರಶಸ್ತಿಗಳನ್ನು ಪಡೆದರು.

ಒಟ್ಟಾರೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಂಜಿನಿಯರಿಂಗ್ ವಿಭಾಗ, ಕ್ರೀಡಾ ಸ್ಪರ್ಧೆಯಲ್ಲಿ ವ್ಯವಹಾರ ಅಧ್ಯಯನ ವಿಭಾಗ ಪ್ರಥಮ ಸ್ಥಾನ ಪಡೆದುಕೊಂಡಿತು.

ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಮಲ್ಲಿಕಾರ್ಜುನ ಹೂಗಾರ, ಜಯದೇವಿ ಜಂಗಮಶೆಟ್ಟಿ, ನವೀನತಾ ಕಾರ್ಯಕ್ರಮದ ಸಂಯೋಜಕ ರಾಜೀವ್ ಜೋಶಿ, ನಿತೀನ್, ಪ್ರೊ.ಪಾಸೋಡಿ, ಪ್ರೊ.ಡೋಣೂರ್, ಸೋಮನಮರಡಿ, ರಾಜಶ್ರೀ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-34-1722156573

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.