ಕಲಬುರಗಿ: ‘ವಿದ್ಯಾರ್ಥಿಗಳು ಬದಲಾಗುತ್ತಿರುವ ಜೀವನಶೈಲಿಯಲ್ಲಿ ಹೆಚ್ಚಾಗಿ ಜಂಕ್ ಆಹಾರ ಸೇವಿಸುತ್ತಿದ್ದಾರೆ. ಇದು ಹಣ ಕೊಟ್ಟು ಅನಾರೋಗ್ಯ ಕೊಂಡುಕೊಳ್ಳುವಂತಿದೆ. ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಮನೆಯಲ್ಲಿ ಸಿದ್ಧಪಡಿಸಿದ ಪೋಷಕಾಂಶಯುಕ್ತ ಆಹಾರ ಸೇವನೆ ಅಗತ್ಯ’ ಎಂದು ಜಿಮ್ಸ್ ವೈದ್ಯ ಡಾ.ಬಸವಕುಮಾರ ಆನಂದಿ ಹೇಳಿದರು.

ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಆರೋಗ್ಯಕ್ಕಾಗಿ ಜೊತೆಯಾಗೋಣ, ವಿಜ್ಞಾನದೊಂದಿಗೆ ನಿಲ್ಲೋಣ’ ಎಂಬ ಘೋಷವಾಕ್ಯದಡಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಮ್ಸ್ನ ಇಂಟರ್ನ್ ವೈದ್ಯೆ ಡಾ.ಶಾಲಿನಿ ಮಾತನಾಡಿ, ‘ಬಾಲಕಿ ಯರಲ್ಲಿ ರಕ್ತದೊತ್ತಡ, ಅನಿಮಿಯಾ ಹಾಗೂ ಅಪೌಷ್ಟಿಕತೆ ಸಮಸ್ಯೆಗಳು ಹೆಚ್ಚಾಗಿವೆ. ಸರಿಯಾದ ಆಹಾರ ಕ್ರಮ ಪಾಲಿಸಿದರೆ ಉತ್ತಮ ಆರೋಗ್ಯ ಸಾಧಿಸಬಹುದು. ಜತೆಗೆ ಮೊಬೈಲ್ ಬಳಕೆ ಕಡಿಮೆ ಮಾಡಿದರೆ ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು’ ಎಂದು ತಿಳಿಸಿದರು.

ಪ್ರಾಂಶುಪಾಲೆ ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಘಟಕದ ಸಂಚಾಲಕಿ ಡಾ. ಆಜ್ರಾ ಪರವೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿಜಯಕುಮಾರ್ ಸಾಲಿಮನಿ, ಡಾ.ಶ್ರೀಮಂತ್ ಬಿ. ಹೋಳಕರ, ಡಾ.ರವೀಂದ್ರಕುಮಾರ ಭಂಡಾರಿ, ಡಾ.ಬಲಭೀಮ ಸಾಂಗ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಅಂಕುಶ ನಿರೂಪಿಸಿದರು. ಉಪನ್ಯಾಸಕಿ ಐಶ್ವರ್ಯಾ ವಂದಿಸಿದರು. ಪ್ರಾಧ್ಯಾಪಕ ಡಾ.ಅನೀಲಕುಮಾರ ಜಗದೇವಪ್ಪ, ಮಂಜುನಾಥ ರೆಡ್ಡಿ, ಮೀನಾಕ್ಷಿ ಕೆ.ಸಿ., ಮೀನಾಕ್ಷಿ ಹುಗ್ಗಿ, ರೆಹಮಾನ್ ಸಾಬ್, ಎಲ್ಲಪ್ಪ ವಗ್ಗಿ, ಬಸಂತ್ ಸಾಗರ್, ಮಾಣಿಕ ಹೋಳಕರ, ರಿಯಾಜ್, ಮೊಹಮ್ಮದ್ ರಹೇಮಾನಸಾಬ್, ಮಹಮದ್ ಪಾಶಾ, ಮಲ್ಲಿಕಾರ್ಜುನ ಶೆಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-34-956909432

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.