ಕಲಬುರಗಿ: ‘ವಿದ್ಯಾರ್ಥಿನಿಯರು ಜೀವನದಲ್ಲಿ ಭವಿಷ್ಯದ ಕನಸು ಹಾಗೂ ಗುರಿಯ ಬಗ್ಗೆ ಸ್ಪಷ್ಟತೆ ಇದ್ದಾಗ ಮಾತ್ರ ಜೀವನದಲ್ಲಿ ನಿಖರ ಗುರಿ ಸಾಧಿಸಲು ಸಾಧ್ಯ’ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿ ಉಪಾಧ್ಯಕ್ಷ ರಾಜಾ ಭೀಮಳ್ಳಿ ಹೇಳಿದರು.

ನಗರದ ಎಚ್ಕೆಇ ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜು ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಕಲಿಯುವಿಕೆ ಪಠ್ಯಕ್ಕೆ ಸೀಮಿತವಾಗಬಾರದು. ಬದುಕಿನ ಪಾಠಗಳನ್ನು ಕಲಿಸುವ ಜೀವನ ಕೌಶಲಗಳು ಕರಗತವಾಗಬೇಕು. ಸವಾಲನ್ನು ಮೆಟ್ಟಿ ನಿಲ್ಲುವ ದೃಢತೆ ಗಳಿಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿ ಜೀವನವು ಭವಿಷ್ಯದ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುವ ಪರ್ವಕಾಲ. ಈ ಅವಧಿಯಲ್ಲಿ ಸರಿಯಾದ ತೀರ್ಮಾನ ಹಾಗೂ ಆಯ್ಕೆ ನಿಮ್ಮದಾಗಬೇಕು. ತಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ ನಿಮಗೆ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸದೃಡತೆ ತರುವಂತಿರಬೇಕು’ ಎಂದರು.

‘ವಿದ್ಯಾರ್ಥಿನಿಯರು ರಾಜಕೀಯ ದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಮೈಗೂಡಿಸಿಕೊಳ್ಳಬೇಕು. ಭವಿಷ್ಯದಲ್ಲಿ ನೀವು ಯಾವುದಾರೂ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳಿ, ಆದರೆ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು’ ಎಂದು ಹೇಳಿದರು.

ರಾಣಿ ಚೆನ್ನಮ್ಮ ವಿವಿಯ ಸಹಾಯಕ ಪ್ರಾಧ್ಯಾಪಕಿ ಮಹೇಶ್ವರಿ ಎಸ್.ಕಾಚಾಪುರ, ಎಚ್ಕೆಇ ಸಂಸ್ಥೆಯ ಕಾರ್ಯದರ್ಶಿ ಉದಯ ಕುಮಾರ ಚಿಂಚೋಳಿ, ಪದವಿಪೂರ್ವ ಕಾಲೇಜು ಸಂಚಾಲಕ ನಾಗಣ್ಣ ಘಂಟಿ, ಅನಿಲ ಕುಮಾರ ಮರಗೋಳ, ಪ್ರಾಚಾರ್ಯ ಆರ್.ಬಿ. ಕೊಂಡಾ, ಉಪಪ್ರಾಚಾರ್ಯೆ ವೀಣಾ ಪಿ.ಎಚ್, ಮೋಹನ ಪತ್ತಾರ ಹಾಜರಿದ್ದರು.

ಸಾಧಕ ವಿದ್ಯಾರ್ಥಿನಿಯರಿಗೆ ಸನ್ಮಾನ: ಬಿಎಸ್ಸಿಯಲ್ಲಿ ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಹುಮಾ ಶೈಯಿಸ್ತಾ, ತೃತೀಯ ರ್ಯಾಂಕ್ ಪಡೆದ ಬುಶ್ರಾ ಇಮಾಮ್, 5ನೇ ರ್ಯಾಂಕ್ ಪಡೆದ ಧನ್ಯಾ ಚಿತ್ತಾಪುರ ಹಾಗೂ 10ನೇ ರ್ಯಾಂಕ್ ಪಡೆದ ನಿಖಿತ್ ಅಂಜೂಮ್ ಅವರನ್ನು ಸನ್ಮಾನಿಸಲಾಯಿತು.

ಟೇಬಲ್ಟೆನಿಸ್, ಬಾಲಿಬಾಲ್, ಬಾಸ್ಕೆಟ್ ಬಾಲ್, ಟೆನಿಸ್ ಹಾಗೂ ಚೆಸ್ನಲ್ಲಿ ಯೂನಿವರ್ಸಿಟಿ ಬ್ಲೂ ಆದ 7 ಜನ ವಿದ್ಯಾರ್ಥಿನಿಯರಿಗೆ ಹಾಗೂ ಎನ್ಸಿಸಿ, ಎನ್ಎಸ್ಎಸ್ ನಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಪಿಎಚ್ಡಿ ಪದವಿ ಪಡೆದ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕಾ ನಾಯಕ ಅವರನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ವೈಭವ: ಕಾಲೇಜಿನ ಕೊನೆಯ ದಿನಗಳು ನೆನಪಿನಲ್ಲಿ ಉಳಿದುಕೊಳ್ಳುವ ಕ್ಷಣವೇ ವಾರ್ಷಿಕೋತ್ಸವ ಸಮಾರಂಭ. ವಾರ್ಷಿಕೋತ್ಸವ ಹಿನ್ನೆಲೆ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಸೀರೆ ತೊಟ್ಟು ಸಂಭ್ರಮಿಸಿದರು. ಕ್ಯಾಂಪಸ್ ಸಂಪೂರ್ಣ ಬಣ್ಣ ಬಣ್ಣದ ಸೀರೆಗಳನ್ನು ತೊಟ್ಟ ವಿದ್ಯಾರ್ಥಿನಿಯರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸ್ನೇಹಿತೆಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸದ ಕ್ಷಣವನ್ನು ಮೊಬೈಲ್ನಲ್ಲಿ ದಾಖಲಿಸಿಕೊಂಡರು.

ಸಂಜೆ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಹಾಡು, ಸಂಗೀತ, ನೃತ್ಯ ಹೀಗೆ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಮಕ್ಕಳ ನೃತ್ಯಕ್ಕೆ ಪಾಲಕರು ಚಪ್ಪಾಳೆ ಮೂಲಕ ಹುರಿದುಂಬಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-34-1825645851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.