ಕಲಬುರಗಿ: ‘ವಿದ್ಯಾರ್ಥಿಗಳು ಪ್ರಯೋಗಾತ್ಮಕ ಅಧ್ಯಯನ, ಸಂಶೋಧನಾ ಮನೋವೃತ್ತಿ ಹಾಗೂ ನವೀನ ಆವಿಷ್ಕಾರಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಸೇಡಂ ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವಾಮನ ಗಾಜ್ರೆ ಹೇಳಿದರು.

ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ವಿಜ್ಞಾನ ಮೇಳ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ತಂತ್ರಜ್ಞಾನಾಧಾರಿತ ಯುಗದಲ್ಲಿ ಕೇವಲ ಭಾವನಾತ್ಮಕ ಬದುಕಿಗಿಂತ ಪ್ರಾಯೋಗಿಕ ಹಾಗೂ ವೈಚಾರಿಕ ಬದುಕು ಅಗತ್ಯವಾಗಿದೆ. ವೈಜ್ಞಾನಿಕ ಚಿಂತನೆ ವ್ಯಕ್ತಿಯ ತಾರ್ಕಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ’ ಎಂದರು.

ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ. ಯು.ಜಿ. ಸರದೇಶಪಾಂಡೆ ಮಾತನಾಡಿ, ಗೃಹ ವಿಜ್ಞಾನ, ಪೌಷ್ಟಿಕಾಂಶ, ಆಹಾರ ಸಂರಕ್ಷಣೆ ಮತ್ತು ಆರೋಗ್ಯ ವಿಜ್ಞಾನಗಳ ಪ್ರಸ್ತುತತೆ ವಿವರಿಸಿದರು. ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಗೋವಿಂದ ಪೂಜಾರ ಅಧ್ಯಕ್ಷತೆ ವಹಿಸಿದ್ದರು.

ವಿಜ್ಞಾನ ಮೇಳದಲ್ಲಿ ಸುಮಾರು 20 ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಮಾದರಿ, ರಾಸಾಯನಿಕ ಕ್ರಿಯೆಗಳು, ಶಕ್ತಿ ಪರಿವರ್ತನೆ, ಪರಿಸರ ಸಂರಕ್ಷಣೆ, ಜಲಶುದ್ಧೀಕರಣ ಸೇರಿದಂತೆ ಹಲವು ವಿಷಯಾಧಾರಿತ ಮಾದರಿಗಳನ್ನು ಪ್ರದರ್ಶಿಸಿದರು.

ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಗೌತಮ್ ಜಹಗೀರದಾರ ಹಾಗೂ ಸಂಸ್ಥೆಯ ಸದಸ್ಯರು ಮೇಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ವೈಜ್ಞಾನಿಕ ಮಾದರಿಗಳು ಮತ್ತು ಪ್ರಯೋಗಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತಮ್ಮ ಪ್ರಯೋಗಗಳ ವೈಜ್ಞಾನಿಕ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಾದ ಶ್ರೀಕಾರ ಮತ್ತು ಕರಣ ವಿಜ್ಞಾನ ಮೇಳದ ಅನುಭವ ಹಂಚಿಕೊಂಡರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂದಿನಿ ಪ್ರಾರ್ಥಿಸಿದರು. ಅಶ್ವಿನಿ ಕೆ.ಆರ್. ನಿರೂಪಿಸಿದರು. ಪ್ರೊ. ಭಾರತಿ ಎಸ್.ಆರ್. ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-34-491819196

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.