ಕಲಬುರಗಿ: ಇದೇ 18ರಿಂದ 22ರವರೆಗೆ ರಷ್ಯಾದಲ್ಲಿ ವಾರ್ಷಿಕವಾಗಿ ನಡೆಯಲಿರುವ ‘ಅಖಿಲ ರಷ್ಯಾ ಲೈಬ್ರರಿ ಕಾಂಗ್ರೆಸ್’ನಲ್ಲಿ ಭಾರತದ ಪ್ರತಿನಿಧಿಯಾಗಿ ತೆರಳಲಿರುವ ತಂಡಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕ ಪ್ರೊ.ಸುರೇಶ ಜಂಗೆ ಅವರು ಆಯ್ಕೆಯಾಗಿದ್ದಾರೆ.

ರಷ್ಯನ್ ಲೈಬ್ರರಿ ಅಸೋಸಿಯೇಶನ್ ಆಯೋಜಿಸಿರುವ ಈ ಐದು ದಿನಗಳ ಸಮ್ಮೇಳನದಲ್ಲಿ ಭಾರತ ಹಾಗೂ ರಷ್ಯಾದ ತಜ್ಞರು ಗ್ರಂಥಾಲಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಚರ್ಚಿಸಲಿದ್ದಾರೆ. ಮುಖ್ಯವಾಗಿ ಡಿಜಿಟಲ್ ತಂತ್ರಜ್ಞಾನದ ಬಳಕೆ, ಗ್ರಂಥಾಲಯಗಳ ಆಧುನಿಕರಣ, ಪುಸ್ತಕಗಳ ಸಂಗ್ರಹಣೆ ವಿಧಾನಗಳ ಬಗ್ಗೆ ಚರ್ಚೆ ನಡೆಯಲಿದೆ.

ಪ್ರೊ.ಸುರೇಶ ಜಂಗೆ ಅವರು ರಷ್ಯಾಕ್ಕೆ ತೆರಳುತ್ತಿರುವುದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹರ್ಷ ವ್ಯಕ್ತಪಡಿಸಿದ್ದಾರೆ. ಜಂಗೆ ಅವರ ಪ್ರವಾಸ, ವಾಸ್ತವ್ಯದ ಸಂಪೂರ್ಣ ವೆಚ್ಚವನ್ನು ರಷ್ಯಾದ ರಾಷ್ಟ್ರೀಯ ಗ್ರಂಥಾಲಯ ಇಲಾಖೆ ಭರಿಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-34-49192095

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.