ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರರು ಕಾನೂನು ಬಾಹಿರವಾದ ಬೇಡಿಕೆಗಳನ್ನು ಇಟ್ಟು ವಿಶ್ವವಿದ್ಯಾಲಯದಲ್ಲಿ ಅಶಿಸ್ತು, ಅಶಾಂತಿಯ ವಾತಾವರಣ ಉಂಟು ಮಾಡಿ ಶೈಕ್ಷಣಿಕ ಪರಿಸರ ಹಾಳು ಮಾಡುತ್ತಿದ್ದಾರೆ. ಹೊರಗುತ್ತಿಗೆ ನೌಕರರ ಮುಖಂಡರನ್ನು ಕರೆಸಿ ಕುಲಪತಿ ಅವರು ಸಭೆ ನಡೆಸಿ ತಿಳಿಹೇಳಿದಾಗಲು ಸಂಘದ ಪದಾಧಿಕಾರಿಗಳು ಹಠಮಾರಿ ಧೋರಣೆ ಮುಂದುವರಿಸಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ್ ಲಂಡನಕರ್ ತಿಳಿಸಿದ್ದಾರೆ.

‘ಹೊರಗುತ್ತಿಗೆ ನೌಕರರಿಗೆ ನೇರವಾಗಿ ವಿಶ್ವವಿದ್ಯಾಲಯದಿಂದ ವೇತನ ಪಾವತಿಸಬೇಕು, ಕನಿಷ್ಠ ವೇತನ ದರದ ವ್ಯತ್ಯಾಸದ ಹಣ ಹಾಗೂ ದಂಡದ ಹಣ ಪಾವತಿಸಬೇಕು, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಟೆಂಡರ್ ಪದ್ಧತಿ ರದ್ದುಪಡಿಸಬೇಕು ಎಂದು ಮೂರು ಬೇಡಿಕೆಗಳನ್ನಿಟ್ಟು ಏ.29ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿರುತ್ತಾರೆ. ಆದರೆ ವಿಶ್ವವಿದ್ಯಾಲ ರಾಜ್ಯ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಆದೇಶ, ಸುತ್ತೋಲೆ, ನಿಬಂಧನೆಗಳನ್ನು ತಪ್ಪದೇ ಪಾಲಿಸಬೇಕಾಗಿರುವುದರಿಂದ ಹಾಗೂ ಸಂಘದವರು ಸಲ್ಲಿಸಿರುವ ಬೇಡಿಕೆಗಳು ನಿಯಮಬಾಹಿರವಾಗಿರುವುದರಿಂದ ಈಡೇರಿಸಲು ಅವಕಾಶ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ವಿಶ್ವವಿದ್ಯಾಲಯ ಭೀಕರ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದ್ದು, ಬಾಕಿ ವೇತನ ಪಾವತಿ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿ ಇರುವುದರಿಂದ ಏಜೆನ್ಸಿ ನೇಮಕ ಮಾಡುವವರೆಗೆ ಧರಣಿ ಕೈಬಿಡಲು ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಒಂದು ವೇಳೆ ಧರಣಿ ಮುಂದುವರಿಸಿದಲ್ಲಿ, ಏನಾದರೂ ಅನಾಹುತ, ಅಹಿತಕರ ಘಟನೆ ನಡೆದಲ್ಲಿ ಸಂಘದ ಮನವಿ ಪತ್ರದಲ್ಲಿ ಸಹಿ ಮಾಡಿ ಸಲ್ಲಿಸಿದ ಪದಾಧಿಕಾರಿಗಳು ನೇರ ಹೊಣೆಯಾಗುತ್ತಾರೆ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-34-1548335730

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.