ಕಲಬುರಗಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕ್ಯಾಂಪಸ್ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 114 ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ಇತ್ತೀಚೆಗೆ ವಿತರಿಸಲಾಯಿತು.

ವಿಟಿಯು ಪ್ರಾದೇಶಿಕ ಕೇಂದ್ರದ ಎಸ್, ಎಸ್ಟಿ ಮತ್ತು ಒಬಿಸಿ ಘಟಕದ ವತಿಯಿಂದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸೌಲಭ್ಯಗಳನ್ನು ಕಲ್ಪಿಸುವ ಹಾಗೂ ಓದಿಗೆ ಪೂರಕವಾಗುವ ನಿಟ್ಟಿನಲ್ಲಿ ಈ ಲ್ಯಾಪ್ಟಾಪ್ ವಿತರಿಸಲಾಗಿದೆ ಎಂದು ಘಟಕದ ಲೈಸನ್ ಅಧಿಕಾರಿ ಪ್ರಲ್ಹಾದ ರಾಠೋಡ ತಿಳಿಸಿದರು.

ವಿಟಿಯು ಕಲಬುರಗಿ ಪ್ರಭಾರ ಪ್ರಾದೇಶಿಕ ನಿರ್ದೇಶಕಿ ಶುಭಾಂಗಿ ಡಿ.ಸಿ. ಮಾತನಾಡಿ, ‘ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳೊಂದಿಗೆ ಸರಿಸಮನಾಗಿ ಅಧ್ಯಯನ ಕೈಗೊಳ್ಳಲು ಅನುವಾಗುವ ನಿಟ್ಟಿನಲ್ಲಿ ಈ ಲ್ಯಾಪ್ಟಾಪ್ಗಳನ್ನು ವಿತರಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳೆಡೆಗಿನ ವಿಟಿಯು ಬದ್ಧತೆಯನ್ನು ತೋರಿಸುತ್ತದೆ’ ಎಂದು ಹೇಳಿದರು.

ವಿಟಿಯು ಎಸ್ಸಿ, ಎಸ್ಟಿ ಸಮಿತಿಯ ಸದಸ್ಯರಾದ ಮನೀತ್ ಪಿ.ಡಿ, ಮೇಘಾರಾಣಿ, ಅಂಬಾದಾಸ್, ರಾಹುಲ್ ಮೂಲಭಾರತಿ ಈ ಸಂದರ್ಭದಲ್ಲಿದ್ದರು.

ಕಾರ್ಯಕ್ರಮ ಸಂಯೋಜಕ, ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಎಂ.ಎ. ವಾಹೀದ್, ಸಿವಿಲ್ ವಿಭಾಗದ ಬೃಜಭೂಷಣ್, ಎಂಜಿಎಂಟಿ ಅಧ್ಯಯನ ವಿಭಾಗದ ಸತೀಶ್ ಉಪಳಾಂವಕರ್, ಆದರ್ಶ್ ಗದಾಲೆ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-34-31471563

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.