ಕಲಬುರಗಿ: ‘ಆತ್ಮವಿಶ್ವಾಸ, ಶ್ರದ್ಧೆ, ಶ್ರಮ ಹಾಗೂ ನಗುಮುಖ ನಮ್ಮ ಸಾಧನೆಯ ಅಸ್ತ್ರಗಳು, ಸಾಧನೆ ಮಾಡಲು ನಮಗೆ ಯಾವುದೇ ಸ್ಥಳ ಹಾಗೂ ನಿರ್ದಿಷ್ಟ ವ್ಯಕ್ತಿಗಳ ಅವಶ್ಯಕತೆಯಿಲ್ಲ. ಸಾಧನೆಗೆ ನಮ್ಮ ಮನೋಬಲ ಹಾಗೂ ನಿರ್ದಿಷ್ಟ ಗುರಿ ಹೊಂದಿದ್ದರೆ ಸಾಕು’ ಎಂದು ಕರ್ನಾಟಕ ಹೈಕೋರ್ಟ್ನ ಕೇಂದ್ರ ಸರ್ಕಾರದ ಹಿರಿಯ ಪ್ಯಾನೆಲ್ ಕೌನ್ಸೆಲ್ ಹೇಮಾ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಪಾಟೀಲ ಮಾತನಾಡಿ, ‘ತಾಂತ್ರಿಕ ಕ್ಷೇತ್ರದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸುತ್ತಿದ್ದು, ನಮ್ಮ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ’ ಎಂದರು.

ಕಾಲೇಜಿನ ಉಪಪ್ರಾಚಾರ್ಯ (ಶೈಕ್ಷಣಿಕ) ಎಸ್.ಆರ್. ಹೊಟ್ಟಿ ಹಾಗೂ ಇನ್ನೋರ್ವ ಉಪಪ್ರಾಚಾರ್ಯೆ (ಆಡಳಿತ) ಭಾರತಿ ಹರಸೂರ, ಕಾಲೇಜಿನ ಮಹಿಳಾ ದೌರ್ಜನ್ಯ ನಿವಾರಣೆ ಸಮಿತಿ ಸಂಚಾಲಕಿ ಇಂದುಮತಿ ಬಿ. ದೇಶಮಾನ್ಯ, ವೀಣಾ ಸರಾಫ್, ಶಿಲ್ಪಾ ಮಂಗಶೆಟ್ಟಿ, ಕಾವೇರಿ ಕೋರಿ, ಪರೀಕ್ಷಾ ನಿರೀಕ್ಷಕಿ ಶ್ರೀದೇವಿ ಸೋಮಾ, ಆಂತರಿಕ ಗುಣಮಟ್ಟ ಭರವಸೆಯ ನಿರ್ದೇಶಕಿ ಸುವರ್ಣಾ ನಂದ್ಯಾಳ ಸೇರಿದಂತೆ ಇತರರು ಭಾಗವಹಿಸಿದ್ದರು.

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ನಿವೇದಿತಾ ಸಿ. ಭಾವಿಮನಿ ಹಾಗೂ ಹುಟ್ಟು ಕುರಡಾಗಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಪೂಜಾ ವಾಡಿ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-34-1503939587

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.