ಕಲಬುರಗಿ: ‘ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್ ಅವರು ಬರೀ ಮಹನೀಯರಲ್ಲ; ಅವರು ಈ ದೇಶದ ಮೂರು ವಸಂತ ಕಾಲಘಟ್ಟಗಳು. ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆಗಳು ಅನನ್ಯ’ ಎಂದು ಚಿಂತಕಿ ಜಯದೇವಿ ಗಾಯಕವಾಡ ಬಣ್ಣಿಸಿದರು.

ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ, ಬುದ್ಧ, ಬಸವ, ಅಂಬೇಡ್ಕರ್ ವಿಚಾರ ವೇದಿಕೆಯಿಂದ ಬುಧವಾರ ಹಮ್ಮಿಕೊಂಡಿದ್ದ ‘ವಚನ ಸಾಹಿತ್ಯ–ಸಂವಿಧಾನದಲ್ಲಿ ಮಹಿಳಾ ಸಬಲೀಕರಣ ಮತ್ತು ಸವಾಲುಗಳು’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

‘6ನೇ ಶತಮಾನದ ಗೌತಮ ಬುದ್ಧ ಶಾಂತಿಗೆ ಎಷ್ಟು ಹೆಸರಾದವರೋ ಅಷ್ಟೇ ಕ್ರಾಂತಿಕಾರಿ ವ್ಯಕ್ತಿ. ದೇಶದ ಚರಿತ್ರೆಯನ್ನು ಮೊಟ್ಟ ಮೊದಲಿಗೆ ಬದಲಿಸಿದ, ಪ್ರಥಮವಾಗಿ ಜಾತಿ, ಮಹಿಳಾ ಅಸಮಾನತೆ, ಮೌಢ್ಯವನ್ನು ಪ್ರಶ್ನಿಸಿದ್ದ ಹೆಗ್ಗಳಿಕೆ ಬುದ್ಧನಿಗೆ ಸಲ್ಲುತ್ತದೆ’ ಎಂದರು.

‘12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವ, ಅಲ್ಲಮರ ಅಧ್ಯಕ್ಷತೆಯ ಅನುಭವ ಮಂಟಪದಲ್ಲಿ ಜಾತಿ–ಮತ–ಹೆಣ್ಣು–ಗಂಡು ಎಂಬ ಭೇದ ಎನಿಸದೇ ಎಲ್ಲ ವರ್ಗಗಗಳ ಶರಣ–ಶರಣೆಯರಿದ್ದರು. ಅಂದೇ ಅಂತರ್ಜಾತಿ ವಿವಾಹವೂ ನಡೆದಿತ್ತು. 21ನೇ ಶತಮಾನದಲ್ಲಿ ಸಂವಿಧಾನ, ಪೊಲೀಸರು, ಕಾಯ್ದೆ–ಕಾನೂನು ಎಲ್ಲವೂ ಇವೆ. ಆದರೆ, ಇಂದಿಗೂ ಜಾತಿವಾದಿ ಮನಸುಗಳು ಬದಲಾಗಿಲ್ಲ. ಅಂತರ್ಜಾತಿ ವಿವಾಹಗಳನ್ನು ಏರ್ಪಡಿಸುವಷ್ಟು ಹಿರಿಯರ ಮನಸುಗಳು ವಿಕಸಿತಗೊಂಡಿಲ್ಲ. ಯುವಕ–ಯುವತಿಯರು ಪ್ರೀತಿಸಿಯೇ ಅಂತರ್ಜಾತಿ ಮದುವೆಯಾಗುವ ಸನ್ನಿವೇಶವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯದ ನಂತರ ಮಹಿಳೆಯರು, ಶೋಷಿತರು, ಹಿಂದುಳಿದವರು, ಪರಿಶಿಷ್ಟರು, ಅಲ್ಪಸಂಖ್ಯಾತರೆಲ್ಲ ದೇಶದಲ್ಲಿ ಸುಖವಾಗಿ ಬದುಕಲು ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಕಾರಣ. ಸಂವಿಧಾನ ಬರುವ ತನಕ ಶಿಕ್ಷಣವು ಒಂದೇ ವರ್ಗದ ಸೊತ್ತು ಆಗಿತ್ತು. ಅಂಬೇಡ್ಕರ್ ಸಂವಿಧಾನದ ಮೂಲಕ ಶಿಕ್ಷಣ ಸಾರ್ವತ್ರಿಕರಣಗೊಳಿಸಿ ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದರು’ ಎಂದರು.

‘ಅಂಬೇಡ್ಕರ್ ಅವರು ಸಂವಿಧಾನದಡಿ ಮಹಿಳೆಯರಿಗೆ ಆಸ್ತಿ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಶಿಕ್ಷಣ, ಉದ್ಯೋಗ, ಗಂಡನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಇವೆಲ್ಲವೂ ಕಾನೂನುಗಳೂ ಆಗಿವೆ. ಇಷ್ಟಾದರೂ ಮಹಿಳೆಯರ ಸಬಲೀಕರಣ ಆಗಿಲ್ಲ. ನಾವೆಲ್ಲ ಮಹಿಳೆಯರು ಶಿಕ್ಷಣ ಪಡೆಯಬೇಕು. ಮೌಢ್ಯ ಮೀರಿ ಬೆಳೆಯಬೇಕು. ಕೀಳರಿಮೆ ಬಿಟ್ಟು ಬಲಿಷ್ಠ ಬದುಕು ಕಟ್ಟಿಕೊಳ್ಳಬೇಕಿದೆ. ಅದಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಆದರ್ಶಗಳಾಗಬೇಕಿದೆ. ಅಂದಾಗ ಸಬಲೀಕರಣ ಸಾಧ್ಯ’ ಎಂದರು.

ಕಾಲೇಜು ಪ್ರಾಚಾರ್ಯ ಪ್ರಕಾಶ ಮೋರಗೆ ಅಧ್ಯಕ್ಷತೆ ವಹಿಸಿದ್ದರು. ಬುದ್ಧ, ಬಸವ, ಅಂಬೇಡ್ಕರ್ ವಿಚಾರ ವೇದಿಕೆಯ ಸಂಚಾಲಕಿ ಪದ್ಮಾವತಿ ಧನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಭೀಮರಾವ ಟಿ.ಟಿ, ಪಾಲಿಕೆ ಸದಸ್ಯೆ ಲತಾ ರಾಠೋಡ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆರ್.ಜಿ.ಶಟಗಾರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಲಾಲ್ ಅಹ್ಮದ್ ಸೇಠ, ಅಶೋಕ ವೀರನಾಯಕ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ, ಸುನೀಲ ಮಾನಪಡೆ, ಮೈಲಾರಿ ದೊಡ್ಡಮನಿ ವೇದಿಕೆಯಲ್ಲಿದ್ದರು. ಭಾಗ್ಯಜ್ಯೋತಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-34-86181973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.