ಕಲಬುರಗಿ: ‘ಜಗತ್ತಿನ ಯಾವುದೇ ಭಾಗದಲ್ಲಿ ಮಹಿಳೆಯರು ಭಾಗವಹಿಸದ ಚಳವಳಿ ಯಶಸ್ವಿಯಾಗಿಲ್ಲ. ಅಷ್ಟರಮಟ್ಟಿಗೆ ಪ್ರತಿಯೊಂದು ರಂಗದಲ್ಲೂ ಮಹಿಳೆ ಅನಿವಾರ್ಯ. ಏಕಕಾಲಕ್ಕೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಮಹಿಳೆಗಿದೆ’ ಎಂದು ಕರ್ನಾಟಕ ಕೇಂದ್ರೀಯ ವಿ.ವಿ. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಜಿಲ್ಲಾ ಮಹಿಳಾ ಘಟಕದ ಸಹಯೋಗದಲ್ಲಿ ಶರಣಬಸವೇಶ್ವರ ದಾಸೋಹ ಸಂಸ್ಥಾನ ಆವರಣದ ಡಾ.ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಹಾಗೂ ‘ಜಾಗತಿಕ ಮಹಿಳಾ ಶಕ್ತಿ–ಅಕ್ಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ವಚನ ಚಳವಳಿ, ಸ್ವಾತಂತ್ರ್ಯ ಚಳವಳಿಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿದ್ದರು. ಇಷ್ಟಾಗಿಯೂ ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದ ಮನ್ನಣೆ, ಗೌರವ ಇನ್ನೂ ಸಿಕ್ಕಿಲ್ಲ. ಅದು ನಮ್ಮ ದಿರಿಸಿನಲ್ಲಿಯೇ ಗೊತ್ತಾಗುತ್ತದೆ. ಗಂಡಸಿನ ಶರ್ಟಿಗೆ, ಪ್ಯಾಂಟಿಗೆ ನಾಲ್ಕಾರು ಜೇಬುಗಳು ಇರುತ್ತವೆ. ಮಹಿಳೆಯರ ಯಾವ ವಸ್ತ್ರಗಳಿಗೂ ಜೇಬು ಇರುವುದಿಲ್ಲ. ಇದರ ಅರ್ಥ ಸಂಪತ್ತನ್ನು ಇರಿಸಿಕೊಳ್ಳುವ ಹಕ್ಕು ಗಂಡಸಿಗಿದೆ ಎಂಬುದು ಅನಾದಿಕಾಲದಿಂದಲೂ ಅಘೋಷಿತವಾಗಿ ನಡೆದುಕೊಂಡು ಬಂದಿದೆ. ವಧು–ವರ ಎಂಬ ಪದಗಳಲ್ಲಿಯೇ ಗಂಡಸು ಬೇಡಿದ್ದು ವರವನ್ನು ಕೊಡುವವನು ಎಂಬ ಅರ್ಥವಿದ್ದರೆ ವಧು ಎಂಬ ಪದ ವಧೆ, ಹಿಂಸೆಗೆ ಒಳಗಾಗಲು ಅರ್ಹಳಾದವಳು ಎಂಬ ಸಮಾನಾರ್ಥಕ ಪದವಿದೆ. ದಕ್ಷಿಣ ಭಾರತದ ದ್ರಾವಿಡ ಸಾಹಿತ್ಯದಲ್ಲಿ ಮಹಿಳೆಯರನ್ನು ಸೌಂದರ್ಯದ ಬದಲು ಅವರ ಗುಣವನ್ನು ಹೊಗಳಲಾಗಿದೆ. ಆದರೆ, ಸಂಸ್ಕೃತದ ಶ್ಲೋಕಗಳಲ್ಲಿ ಹೆಣ್ಣಿನ ದೇಹದ ಬಗ್ಗೆಯೇ ಹೆಚ್ಚು ವರ್ಣಿಸಲಾಗಿದೆ’ ಎಂದು ಹೇಳಿದರು.

‘ಇಡೀ ಜಗತ್ತೇ ಮಹಿಳೆಯರನ್ನು ಶೋಷಿಸಿದ ಬಗೆಯನ್ನು ಅಮೆರಿಕದ ಎಫ್ಸ್ಟೀನ್ ಫೈಲ್ಗಳ ಮೂಲಕ ಅರಿತುಕೊಂಡಿದೆ. ಹೆಣ್ಣನ್ನು ಭೋಗದ ವಸ್ತು ಎಂದುಕೊಂಡವರು ಹೀನಾತಿಹೀನ ಕೃತ್ಯಗಳನ್ನು ಎಸಗಿದ್ದು ನಾಚಿಕೆಗೇಡಿನ ಸಂಗತಿ. ಆ ಸಂಗತಿಯನ್ನು ಜಗತ್ತು ಮರೆಯಲಿ ಎಂಬ ಕಾರಣಕ್ಕೇ ಅಮೆರಿಕ ಇರಾನ್ ಮೇಲೆ ಯುದ್ಧ ಹೂಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಳಿನಿ ಮಹಾಗಾಂವಕರ್ ಮಾತನಾಡಿ, ‘ಅಕ್ಕಮಹಾದೇವಿ ಎಂಬುದು ಬರೀ ಹೆಸರಲ್ಲ ಒಂದು ಚಿಂತನೆ, ಕ್ರಾಂತಿ. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದ ರೂಢಿ, ಸಂಪ್ರದಾಯಗಳನ್ನು ಪ್ರಶ್ನಿಸಿದವರು. ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟ ಜಗತ್ತಿನ ಮೊದಲ ಧರ್ಮ ಇದ್ದರೆ ಅದು ಲಿಂಗಾಯತ ಧರ್ಮ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಮಾನ್ಯತೆಗಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಾ ಇದ್ದೇವೆ. ನಾವು ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ. ಗುರಿ ಈಡೇರುವವರೆಗೆ ವಿಶ್ರಮಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಪತಿ ದಾಕ್ಷಾಯಣಿ ಎಸ್. ಅಪ್ಪ ಅವರಿಗೆ ‘ಜಾಗತಿಕ ಮಹಿಳಾ ಶಕ್ತಿ–ಅಕ್ಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ, ಅಮರೇಶ್ವರ ಬಾಬುರಾವ ಚಿಂಚನಸೂರ, ಸುರೇಖಾ ರಾಜಕುಮಾರ, ಶಿಕ್ಷಕಿ ಪರ್ವಿನ್ ಸುಲ್ತಾನ, ಮಾಲಾ ಕಣ್ಣಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ರೇಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಭಾರತಿ ರೇಶ್ಮಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಆರ್.ಜಿ. ಶೆಟಗಾರ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಕೋಣಿನ್ ವೇದಿಕೆಯಲ್ಲಿದ್ದರು. ನಂತರ ವಿವಿಧ ಗೋಷ್ಠಿಗಳು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-34-1884338408

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.