ಕಲಬುರಗಿ: ‘ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಇದ್ದು, ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಶಕ್ತಿ ಬರುತ್ತದೆ. ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ದೊರೆಯಬೇಕು’ ಎಂದು ಲೇಖಕಿ ಪ್ರೊ.ನೀಲಾಂಬಿಕಾ ಪೊಲೀಸ್ ಪಾಟೀಲ ಹೇಳಿದರು.

ನಗರದಲ್ಲಿ ನಾಲ್ಕು ಚಕ್ರ ಚಾರಿಟಬಲ್ ಟ್ರಸ್ಟ್ನಿಂದ ಏರ್ಪಡಿಸಿದ್ದ ಶ್ರೇಷ್ಠ ಕನ್ನಡಿಗ ಪ್ರಶಸ್ತಿ, ಕವಿಗೋಷ್ಠಿ ಹಾಗೂ ಕಲಬುರಗಿ ಕಣ್ಮಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಹಿತ್ಯ ತನ್ನದೇ ಸ್ಥಾನ ಹೊಂದಿದ್ದು, ಕಸಾಪದಂತ ಸಂಸ್ಥೆಯಲ್ಲಿ ಅಧಿಕಾರ ದೊರಕಿದರೆ ಇನ್ನಷ್ಟು ಪ್ರಾಧಾನ್ಯತೆ ದೊರೆಯಲಿದೆ ಎಂದರು.

ನಗರದ ಕದಳಿ ಸಿರಿ ಆಸ್ಪತ್ರೆಯ ಮುಖ್ಯಸ್ಥೆ ಡಾ.ಭಾಗ್ಯಶ್ರೀ ಶರಣಪ್ರಕಾಶ್ ಪಾಟೀಲ ಮಾತನಾಡಿ, ಮುಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದು ಸಾಧನೆ ಮಾಡಬೇಕು. ಅದಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್, ನಾಲ್ಕು ಚಕ್ರ ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ ಮಾತನಾಡಿದರು.

ಪಾಳಾದ ಗುರುಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ಉಪ ಆಯುಕ್ತೆ ಪ್ರಮೀಳಾ ಎಂ.ಕೆ, ಪತ್ರಕರ್ತ ಬಾಬುರಾವ ಯಡ್ರಾಮಿ, ದಿಶಾ ಕಾಲೇಜಿನ ಅಧ್ಯಕ್ಷ ಶಿವಾನಂದ ಖಜೂರ್ಗಿ, ಪ್ರಮುಖರಾದ ರಮೇಶ ತಿಪನೋರ್, ಉಮೇಶ ಶೆಟ್ಟಿ, ಶರಣು ಪಾಟೀಲ ಇತರರಿದ್ದರು. ಅಂಬುಜಾ ಎಂ.ಡಿ. ನಿರೂಪಣೆ ಮಾಡಿದರು.

ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪ್ರದಾನ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರಿಗೆ ವರ್ಷದ ಶ್ರೇಷ್ಠ ಕನ್ನಡಿಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸೀಮಾ ಪಾಟೀಲ (ಶಿಕ್ಷಣ), ರೇಣುಕಾ ಹೆಳವರ (ಪೊಲೀಸ್ ಇಲಾಖೆ), ಮಂಜುಳಾ ಬಿರಾದಾರ (ಸಹಕಾರ ಕ್ಷೇತ್ರ), ಬಾಬುಮೀಯ ಪುಲಾರಿ (ಸಾಹಿತ್ಯ ಮತ್ತು ಸಂಟನೆ), ರವಿ ದೇಗಾಂವ (ಕನ್ನಡಪರ ಹೋರಾಟಗಾರ), ಬಿ.ಎಚ್.ನಿರಗುಡಿ (ಸಾಹಿತ್ಯ), ಕಲ್ಯಾಣರಾವ ಶೀಲವಂತ (ಶಿಕ್ಷಣ), ಅಂಬುಜಾ ಮಳಖೇಡಕರ್ (ಸಾಹಿತ್ಯ), ಶಾಂತಮಲ್ಲಪ್ಪ ಕರೇಕಲ್ (ಸಾಹಿತ್ಯ), ರೇಣುಕಾ ಸರಡಗಿ (ಮಹಿಳಾ), ಪವನಕುಮಾರ ವಳಕೇರಿ (ಸಾಮಾಜಿಕ) ಅವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕವಿಗೋಷ್ಠಿಯಲ್ಲಿ ರಾಜಕುಮಾರ, ಕೆ.ಗಿರಿಮಲ್ಲ. ಪರ್ವಿನ್ ಸುಲ್ತಾನಾ, ರಾಜಶೇಖರ ಮಾಂಗ್, ರೇಣುಕಾ ಡಾಂಗೆ, ಬಾಬು ಕವನ ವಾಚಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-34-1151057835

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.