ಕಾಳಗಿ: ‘ಅಸಮಾನತೆ, ಅಂಧಕಾರ, ಮೂಢನಂಬಿಕೆ ಹೋಗಲಾಗಿಸಲು ಡಾ.ಬಿ.ಆರ್ ಅಂಬೇಡ್ಕರ್ ಅವರು ಹೋರಾಟದ ದಾರಿ ಆಯ್ಕೆ ಮಾಡಿಕೊಂಡಿರುವುದು ಅನನ್ಯವಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ಹೇಳಿದರು.

ತಾಲ್ಲೂಕಿನ ತಾಡಪಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರು ಮಂಡಿಸಿದ ಹಿಂದೂ ಕೋಡ್ಬಿಲ್ ದೇಶದ ಎಲ್ಲಾ ವರ್ಗದ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಸಿಗಬೇಕೆಂದು ಪ್ರತಿಪಾದಿಸಿತ್ತು. ಅಂಬೇಡ್ಕರ್ ತಳಸಮುದಾಯಗಳ ಮೀಸಲಾತಿಗಾಗಿ ಅಷ್ಠೇ ಹೋರಾಟ ಮಾಡಲಿಲ್ಲ, ದೇಶದ ಎಲ್ಲಾ ಜನರ ಒಳತಿಗಾಗಿ ಹೋರಾಡಿದರು’ ಎಂದರು.

ಅಬಕಾರಿ ಸರ್ಕಲ್ ಇನ್ಸ್ಪೆಕ್ಟರ್ ಧನರಾಜ, ವಿಭಾಗೀಯ ಅಬಕಾರಿ ಅಧಿಕಾರಿ ಮಲ್ಲಿಕಾರ್ಜುನ ಹೊನಗುಂಟಿ, ನಿವೃತ್ತ ಪಿಎಸ್ಐ ಶಂಕರ ತಿಗಡಿ, ರೇವಣಸಿದ್ದಪ್ಪ ಸುಭೇದಾರ, ಮುಖ್ಯಶಿಕ್ಷಕ ದೇವಪ್ಪ, ಅಶೋಕ ಹೂವಿನಬಾವಿ, ಸಾಗರ ರಾಜಶೇಖರ, ಪತ್ರಕರ್ತ ರಮೇಶ ಕುಡ್ಹಳ್ಳಿ, ಉಮೇಶ ದೋಟಿಕೋಳ, ಸಂತೋಷ ಖನ್ನಾ, ರಾಜು, ಅನೀಲ, ತುಕ್ಕಪ್ಪ ಮಾತನಾಡಿದರು. ಜೈ ಭೀಮ್ ಹೋಳ್ಕರ್ ನಿರೂಪಿಸಿ, ಉಮೇಶ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-31-794658579

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.