ಕಾಳಪ್ಪನಹಳ್ಳಿ (ಹೊಸಕೋಟೆ): ತಾಲ್ಲೂಕಿನ ಶಿವನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಪ್ಪನಹಳ್ಳಿಯಲ್ಲಿ ಷಡಕ್ಷರಿ ಶಾಸ್ತ್ರಿ ಕುಟುಂಬದಿಂದ ₹30 ಲಕ್ಷ ವೆಚ್ಚದಲ್ಲಿ ನೂತನ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಈಚೆಗೆ ಭೂಮಿಪೂಜೆ ನೆರವೇರಿಸಲಾಯಿತು.

ಮಾತೃಕ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ, ಶಾಲಾ ಕಟ್ಟಡದ ದಾನಿ ಕೆ.ಆರ್. ಷಡಕ್ಷರಿ ಶಾಸ್ತ್ರಿ ಮಾತನಾಡಿ, ‘ನಮ್ಮ ತಂದೆ ರಾಚೂಟಪ್ಪಸ್ವಾಮಿ ಸ್ಮರಣಾರ್ಥ ಗ್ರಾಮಕ್ಕೆ ಶಾಲಾ ಕೊಠಡಿಯ ಅವಶ್ಯಕತೆ ಇರುವುದನ್ನು ಮನಗಂಡು ₹30 ಲಕ್ಷ ವೆಚ್ಚದಲ್ಲಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲೆಂದು ಗ್ರಾಮದ ಷಡಕ್ಷರಿ ಶಾಸ್ತ್ರೀ ಅವರ ಕುಟುಂಬ ಲಕ್ಷಾಂತರ ಹಣ ಖರ್ಚು ಮಾಡಿ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿರುವುದು ನಿಜಕ್ಕೂ ಪ್ರಶಂಸನೀಯ ಸಂಗತಿ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ದೇಶದ ಸಮಗ್ರ ಅಭಿವೃದ್ಧಿಗೆ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ. ಈ ನಿಟ್ಟಿನಲ್ಲಿ ದಾನಿಗಳು ಖಾಸಗಿ ಶಾಲೆಗಿಂತ ಏನು ಕಡಿಮೆ ಇಲ್ಲ ಎನ್ನುವಂತೆ ಆಟ ಪಾಠಗಳಿಂದ ಕೂಡಿದ ಕಲಿಕೆಗೆ ಅನುವಾಗುವಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಮೆಚ್ಚುವ ಸಂಗತಿ. ಪ್ರತಿ ಗ್ರಾಮದಲ್ಲೂ ಈ ರೀತಿ ಇನ್ನಷ್ಟು ದಾನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಲು ಮುಂದಾಗಬೇಕಿದೆ ಎಂದು ಹೇಳಿದರು.

ಬಿ.ವಿ. ರಾಜಶೇಖರಗೌಡ, ರಾಜಶೇಖರ್, ಭೂ ಮಂಜೂರಾತಿ ಸಮಿತಿ ಸದಸ್ಯ ನಾರಾಯಣಸ್ವಾಮಿ, ಕೆ.ಆರ್. ಶಿವಣ್ಣ, ದೇವರಾಜ್, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಪ್ರಿಯಾಂಕ ರಮೇಶ್, ಮಂದೀಪ್ಗೌಡ, ಗುರುಬಸಪ್ಪ, ಮಂಜುನಾಥ್, ಈಶ್ವರಪ್ಪ, ನರಸಿಂಹಯ್ಯ, ಪಿಡಿಒ ಮುನಿಗಂಗಯ್ಯ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-15-95043325

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.