ಕಳಸ: ಇಲ್ಲಿನ ಕೆಪಿಎಸ್ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ವಿಜ್ಞಾನ ಮಾದರಿಯ ಸೆಮಿಫೈನಲ್ ತಲುಪಿದ್ದಾರೆ.

ಈ ಸ್ಪರ್ಧೆಯಲ್ಲಿ ಮೊದಲ 10 ಸ್ಥಾನ ಪಡೆಯುವ ತಂಡಗಳು ಪುಣೆಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶಿಸುವ ಅರ್ಹತೆ ಪಡೆಯುತ್ತವೆ.

ಮೇಡ್ ಇನ್ ಇಂಡಿಯಾ ಥ್ರೀ ಡಿ ಸ್ಫರ್ಧೆಯಲ್ಲಿ ಸೆಮಿಫೈನಲ್ ಹಂತಕ್ಕೆ ಆಯ್ಕೆಯಾದ ದೇಶದ 30 ಶಾಲೆಗಳ ಪೈಕಿ ಕಳಸ ಕೆಪಿಎಸ್ ಶಾಲೆ ಕೂಡ ಒಂದು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಶಾಲೆಯ ವಿದ್ಯಾರ್ಥಿಗಳು ಇದೇ 25ರಂದು ಆನ್ಲೈನ್ ಮೂಲಕ ನಡೆಯುವ ವೆಬಿನಾರಿನಲ್ಲಿ ತಮ್ಮ ವಿಜ್ಞಾನ ಮಾದರಿ ಪ್ರದರ್ಶಿಸಲಿದ್ದಾರೆ. ವಿದ್ಯಾರ್ಥಿಗಳಾದ ಶಿವಾನಂದ್, ಸಾಹಿತ್ಯ, ನಿಧಿ, ಮಿಸ್ಬಾ, ಫಾತಿಮಾ, ಸಮೀಕ್ಷಾ ಸುಜ್ಞಾನ್ ಈ ಆನ್ಲೈನ್ ಸ್ಫರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಗಣಿತ ಶಿಕ್ಷಕ ಸಂದೇಶ್ ಮಾರ್ಗದರ್ಶನ ಮತ್ತು ವಿಜ್ಞಾನ ಶಿಕ್ಷಕ ಲೋಕೇಶ್ ಸತೀಶ್ ಮೇಲುಸ್ತುವಾರಿಯಲ್ಲಿ ಮಕ್ಕಳು ಸಿದ್ಧತೆ ನಡೆಸಿದ್ದಾರೆ.

ಈ ಹಿಂದೆ ಕಳಸ ಕೆಪಿಎಸ್ ಶಾಲಾ ತಂಡ ಆಂಧ್ರಪ್ರದೇಶದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಅರ್ಹತೆ ಗಳಿಸಿತ್ತು. ಶಾಲೆಯ ಅಟಲಜೀ ಪ್ರಯೋಗಾಲಯದ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳು ಕೂಡ ರಾಷ್ಟ್ರಮಟ್ಟದ ಸ್ಪರ್ಧೆಗೆ ಅವಕಾಶ ಪಡೆಯುವುದು ಸಾಧ್ಯವಾಗಿದೆ. ನಮ್ಮ ಊರಿನ ಮಕ್ಕಳ ಹೊಸತನ, ಸೃಜನಶೀಲತೆ ಮತು ಉದ್ಯಮಶೀಲತಾ ಮನೋಭಾವ ಹೊರಬರುತ್ತಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಸುರೇಶ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-126-318725134

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.