ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಪ್ರದೇಶ ಬಹಳಷ್ಟು ಹಿಂದುಳಿಯಲು ಈ ಭಾಗದ ರಾಜಕಾರಣಿಗಳು, ಅಧಿಕಾರಿಗಳು ಕಾರಣ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದ್ದು, ಯುವ ಎಂಜಿನಿಯರ್ಗಳು ಈ ಭಾಗದ ಪ್ರಗತಿಗೆ ಹೆಗಲು ನೀಡಬೇಕಾದ ಅಗತ್ಯ ಇದೆ ಎಂದು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.

ಇಲ್ಲಿನ ಪ್ರೌಢದೇವರಾಯ ಎಂಜಿನಿಯರಿಂಗ್ ಕಾಲೇಜ್ನಲ್ಲಿ (ಪಿಡಿಐಟಿ) ಬುಧವಾರ ಹಮ್ಮಿಕೊಂಡ ‘ಸಿಂಚನ-2026’ ಪದವಿ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಿ ಅವರು ಮಾತನಾಡಿದರು.

‘ಯುವ ಪದವೀಧರರು ಈ ಭಾಗದಲ್ಲಿ ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳನ್ನು ಮತ್ತು ಸ್ಟಾರ್ಟ್-ಅಪ್ಗಳನ್ನು ಆರಂಭಿಸಬೇಕು. ಇಲ್ಲಿ ಯಾವುದೇ ಸೌಕರ್ಯಗಳು ದೊರೆಯುವುದಿಲ್ಲ ಎಂದು ಕೈಚಾಚಿ ಕುಳಿತರೆ ಇನ್ನು ಹಲವು ವರ್ಷಗಳು ಕಳೆದರೂ ನಾವು ಹೀಗೆಯೇ ಹಿಂದುಳಿದೇ ಇರಬೇಕಾಗುತ್ತದೆ’ ಎಂದು ಅವರು ಕಿವಿಮಾತು ಹೇಳಿದರು.

‘ತಂತ್ರಜ್ಞಾನ ಮತ್ತು ವ್ಯಾಪಾರವು ದೇಶದ ಅಭಿವೃದ್ಧಿಯ ಎರಡು ಕಣ್ಣುಗಳಿದ್ದಂತೆ. ಇವೆರಡರಲ್ಲಿ ಯಾವುದೇ ಒಂದು ಪತನ ಹೊಂದಿದರೂ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಿಡಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಕಲ್ಗುಡಿ ಮಂಜುನಾಥ್ ಮಾತನಾಡಿ, ಪದವಿ ಎನ್ನುವುದು ಕಲಿಕೆಯ ಅಂತ್ಯವಲ್ಲ, ಅದು ಜೀವನದ ಹೊಸ ಆರಂಭ. ವಿದ್ಯಾರ್ಥಿಗಳು ಜೀವನದಲ್ಲಿ ಪ್ರಾಮಾಣಿಕತೆ, ಆತ್ಮವಿಶ್ವಾಸ ಮತ್ತು ಪೋಷಕರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಎನ್ಸಿಸಿ ಕೆಡೆಟ್ಗಳ ಸಮ್ಮುಖದಲ್ಲಿ ಪದವಿ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಯಿತು. ಕಾಲೇಜಿನ 400ಕ್ಕೂ ಹೆಚ್ಚು ಬಿ.ಇ. ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.

ಪ್ರಾಂಶುಪಾಲ ಪ್ರೊ.ರೋಹಿತ್ ಯು.ಎಂ., ಪ್ರತಿಜ್ಞಾ ವಿಧಿ ಬೋಧಿಸಿದರು. ಪದವಿ ದಿನಾಚರಣೆಯ ಸಂಯೋಜಕರಾದ ಪ್ರೊ. ಮಂಜುಳಾ ಎಸ್. ಡಿ., ಆಡಳಿತ ಮಂಡಳಿಯ ಸದಸ್ಯರಾದ ಐ.ಎನ್. ಸಂಗನಬಸಪ್ಪ, ಅನಿಲ್ ಆರ್. ಜವಳಿ, ಬಿ.ಚಂದ್ರಮೌಳಿ, ಉಪಪ್ರಾಂಶುಪಾಲರಾದ ಪ್ರೊ.ಪಾರ್ವತಿ ಕಡ್ಲಿ, ‘ಸಿಂಚನ-2026’ ಕಾರ್ಯಕ್ರಮದ ಸಂಯೋಜಕ ಪ್ರೊ. ರವಿಕುಮಾರ್ ಎಸ್. ಪಿ., ಇದ್ದರು.

ಸಂಜೆ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-25-1846897218

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.