ಕಮಲನಗರ: ‘ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಬೆಳೆಸಿಕೊಂಡು ಆತ್ಮಸ್ಥೈರ್ಯ, ಆತ್ಮಬಲದೊಂದಿಗೆ ಏಕಾಗ್ರತೆ ಅಳವಡಿಸಿಕೊಂಡು ಸಾಗಿದರೆ ಸಾಧನೆ ಖಚಿತ’ ಎಂದು ಪ್ರಾಚಾರ್ಯ ಶಿವಾಜಿ ಆರ್.ಎಚ್ ಹೇಳಿದರು.

ಪಟ್ಟಣದ ಶಾಂತಿವರ್ಧಕ ಪಿಯು ಕಾಲೇಜಿನಲ್ಲಿ ಸೋಮವಾರ ಕಾಲೇಜು ಪ್ರಾರಂಭೋತ್ಸವ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪಾಲಕ ಪ್ರತಿನಿಧಿ ಬಾಬುರಾವ ಪಾಟೀಲ ಹೊರಂಡಿ ಮಾತನಾಡಿ, ಇಂದಿನ ಯುವ ಜನ ಪುಸ್ತಕಕ್ಕೆ ಸೀಮಿತವಾಗದೆ, ಸಮಾಜದಲ್ಲಿನ ಓರೆಕೋರೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು. ಸಮಾಜದಲ್ಲಿ ಬರುವ ನಕರಾತ್ಮಕ ಯೋಚನೆಗಳಿಗೆ ಆದ್ಯತೆ ನೀಡದೆ ಮಹಾತ್ಮರ ಚಿಂತನೆಗಳಿಂದ ಪ್ರೇರಣೆ ಪಡೆದು ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.

ವಿಶ್ವನಾಥ ಕಿವಡೆ, ಓಂಕಾರ ಸೂರ್ಯವಂಶಿ, ಶಿವಶಂಕರ, ಶ್ರೀಕಾಂತ ಪ್ಯಾಗೆ, ಸುಭಾಷ ರಾಠೋಡ್, ಶರಣಗೌಡ ಪಾಟೀಲ, ಕಾದಂಬಿನಿ, ಬಸವಾಂಬಿಕಾ, ವೆಂಕಟ ಮೋರೆ, ಶಿವಶಂಕರ ಕಾಂಬಳೆ, ಚಂದ್ರಕಾಂತ ಭೈರೆ, ವಿಜಯಲಕ್ಷ್ಮೀ, ಯಲ್ಲಾಲಿಂಗ ಹಾಗೂ ವಿದ್ಯಾರ್ಥಿಗಳು ಇದ್ದರು.

ಅತಿಯಾ ಪ್ರಾರ್ಥನೆ ಗೀತೆ ಹಾಡಿದರು. ಓ.ಕೆ.ಸೂರ್ಯವಂಶಿ ಸ್ವಾಗತಿಸಿದರು. ಸುನೀಲ ಬಾರೋಳೆ ನಿರೂಪಿಸಿದರು. ಕಾಳಿದಾಸ ಬೌದ್ಧೆ ವಂದಿಸಿದರು. ವಿದ್ಯಾರ್ಥಿಗಳಿಗೆಲ್ಲರಿಗೂ 2026-27ನೇ ಶೈಕ್ಷಣಿಕ ಸಾಲಿನ ಮೊದಲ ದಿನದಂದು ಗುಲಾಬಿ ಹೂ, ಪೆನ್ ನೀಡಿ ಸಿಹಿ ತಿನ್ನಿಸಿ ತರಗತಿಗೆ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-33-1985348758

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.