ಕಮಲಾಪುರ: ‘ಆಡಳಿತ, ಕಲೆ, ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ ಕ್ಷೇತ್ರಗಳಿಗೆ ಯಾವುದೇ ಪ್ರಚಾರ ಬಯಸದೆ ತಮ್ಮದೆಯಾದ ಕೊಡುಗೆ ನೀಡುತ್ತಿರುವ ಎಲೆಮರೆ ಸಾಧಕರ ಸಾಧನೆ ಮರೆಯಾಗಬಾರದು. ಅವರನ್ನು ಗುರುತಿಸುವ ಕೆಲಸ ಮಾಡಬೇಕು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದರು.

ತಾಲ್ಲೂಕಿನ ನಾವದಗಿ ದೇಶಿ ಕೇಂದ್ರೀಯ ವಸತಿ ಶಾಲೆ ಸಾಂಸ್ಕೃತಿಕ ಲೋಕದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕಲಬುರಗಿಯ ಹಂಶಿಕಾ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‘ಚಿನ್ಮಯಜ್ಞಾನಿ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಸಮಾಜದಲ್ಲಿ ಎಲ್ಲರೂ ದೊಡ್ಡ ಸಾಧನೆ ಮಾಡಬೇಕಿಲ್ಲ. ತಾವಿದ್ದ ನೆಲಕ್ಕೆ, ಸಮಾಜಕ್ಕೆ, ತಮ್ಮ ವೃತ್ತಿಯಲ್ಲಿ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಅದೂ ಸಹ ದೊಡ್ಡ ಸಾಧನೆ. ರಾಜ್ಯ ಮಟ್ಟದ ಪ್ರಶಸ್ತಿ ವಿತರಣೆಯಲ್ಲಿ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಸದಾ ಅನ್ಯಾಯ, ತಾರತಮ್ಯ ಮುಂದುವರಿಯುತ್ತಿದೆ. ಅವರಿಗೆ ಬೆನ್ನು ಹತ್ತುವ ಬದಲು ನಮ್ಮವರ ಸಾಧನೆಯನ್ನು ನಾವೇ ಗುರುತಿಸುವುದು ಒಳ್ಳೆಯದು’ ಎಂದರು.

ಬಿಜೆಪಿ ನಾಯಕಿ ಜಯಶ್ರೀ ಮತ್ತಿಮಡು ಮಾತನಾಡಿ, ‘ಪ್ರಶಸ್ತಿಗಳಿಂದ ಜವಾಬ್ದಾರಿ ಹೆಚ್ಚುತ್ತದೆ. ಸಮಾಜದಲ್ಲಿ ಗುರುತಿಸಿಕೊಂಡ ಬಳಿಕ ನಮ್ಮ ನಡೆ, ನುಡಿ ಎಲ್ಲವೂ ತತ್ವನಿಷ್ಠವಾಗಿರಬೇಕು. ತಮ್ಮದೆಯಾದ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವ ಕರ್ತವ್ಯ ನಿಷ್ಠೆಯೆ ದೊಡ್ಡ ಸಾಧನೆ’ ಎಂದು ಹೇಳಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಿದ್ದಲಿಂಗ ಕೋನೆಕ, ಕರುಣಾ ಜಮದರಖಾನಿ, ಪ್ರೇಮಾ ಅಪಚಂದ, ಗಂಗಾಧರ ದೇಸಾಯಿ, ಮಲ್ಲಮ್ಮ ಶಿವರಾಜ ಕಾಳಗಿ, ರಮೇಶ ಕೆ. ಮುರುಡ, ಗುರುಬಾಯಿ ಎಸ್. ಬಿರಾದಾರ, ಭುವನೇಶ್ವರಿ ಶಿವರಾಜ ಧಟ್ಟಿ, ಮಂಜುಳಾ ಎಮ್. ಪಾಟೀಲ, ಸಾವಿತ್ರಿ ಚಿಟ್ಟೆ ಅವರಿಗೆ 'ಚಿನ್ಮಯಜ್ಞಾನಿ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಶರಣಬಸಪ್ಪ ವಡ್ಡನಕೇರಿಯವರ 8 ಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯರ್ಥಿಗಳಿ ಸನ್ಮಾನಿಸಲಾಯಿತು.

ದೇಶಿ ಕೇಂದ್ರ ವಸತಿ ಶಾಲೆ ಅಧ್ಯಕ್ಷ ರಾಜೇಂದ್ರ ಯರನಾಳೆ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸಪ್ಪ ವಡ್ಡಣಕೇರಿ, ಹಂಶಿಕಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶರಣು ಹೊನ್ನಗೆಜ್ಜೆ, ವೀಣಾ ಯರನಾಳೆ, ವೀಣಾ ರಾವೂರ, ಶಿವರಾಜ ಧಟ್ಟಿ, ಶಿವರಾಜ ಕಾಳಗಿ ಮತ್ತಿತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-31-316221794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.