ಕಂಪ್ಲಿ: 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಶೇ 85 ಅಂಕ ಗಳಿಸಿದ ಕಂಪ್ಲಿ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳನ್ನು ಇಲ್ಲಿನ ವೀರಶೈವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು ಅಭಿನಂದಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಬಳಿಕ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಬಹುತೇಕ ವಸತಿ ನಿಲಯ, ವಸತಿಯುತ ಶಾಲೆಗಳು ಆರಂಭಿಸಲಾಗಿದೆ. ಕ್ಷೇತ್ರದ ದೇವಸಮುದ್ರ, ದಮ್ಮೂರು, ಶ್ರೀಧರಗಡ್ಡೆ, ಸಿದ್ದಮ್ಮನಹಳ್ಳಿಯಲ್ಲಿ ಮುಂದಿನ ದಿನಗಳಲ್ಲಿ ಪಿಯು ಕಾಲೇಜು ಆರಂಭಗೊಳ್ಳಲಿವೆ ಎಂದು ತಿಳಿಸಿದರು.

ತಂದೆ ತಾಯಿಗಳ ಆಶಯಗಳನ್ನು ಅರಿತು ಮಕ್ಕಳು ಅದನ್ನು ಈಡೇರಿಸಲು ಛಲ ತೊಡಬೇಕು. ಪ್ರಾಮಾಣಿಕತೆ, ಮಾನವೀಯತೆ, ನೈತಿಕ ಸಂಸ್ಕಾರ ಬೆಳೆಸಿಕೊಳ್ಳಬೇಕು. ಜೊತೆಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಬಿಇಒಗಳಾದ ಟಿ.ಎಂ.ಸಿದ್ದಲಿಂಗಮೂರ್ತಿ, ಕಸ್ತೂರಿ, ಶಿಕ್ಷಣ ಸಂಯೋಜಕ ವಿಶ್ವನಾಥ, ಖಾಸಗಿ ಆಡಳಿತ ಮಂಡಳಿ ಗೌರವಾಧ್ಯಕ್ಷ ಪಿ. ನಾಗೇಶ್ವರರಾವ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್. ದೊಡ್ಡಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಹನುಮಂತಪ್ಪ, ಇಸಿಒ ಟಿ.ಎಂ. ಬಸವರಾಜ, ಎಂ. ರೇವಣ್ಣ, ಶಾಸಕ ಗಣೇಶ್ ಪತ್ನಿ ಶ್ರೀದೇವಿ ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪ್ರಮುಖರಾದ ಬಿ. ಸಿದ್ದಪ್ಪ, ನೆಣಕಿ ಗಿರೀಶ್, ಬಳ್ಳಾಪುರ ಲಿಂಗಪ್ಪ, ಕೆ. ಷಣ್ಮುಖಪ್ಪ, ಸುಗ್ಗೇನಹಳ್ಳಿ ರಮೇಶ್, ಬಿ. ಜಾಫರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-25-217545434

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.