ಕನಕಗಿರಿ: ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕುವೆಂಪು ಭಾಷಾ ಪ್ರಾಧಿಕಾರದ ಸದಸ್ಯ ಜಾಜಿ ದೇವೇಂದ್ರಪ್ಪ ಮಾತನಾಡಿ, ‘ಭಾರತ ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯ ಯುವಜನತೆ ಹೊಂದಿರುವ ದೇಶವಾಗಿದ್ದರೂ ಉತ್ಪಾದಕತೆ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿರುವುದು ಶೋಚನೀಯ’ ಎಂದು ವಿಷಾದಿಸಿದರು.

ಲಕ್ಷಾಂತರ ಯುವಕರು ಪದವಿ ಮುಗಿಸಿ ಹೊರಬರುತ್ತಿದ್ದು ಅವರಲ್ಲಿ ಉದ್ಯೋಗಗಳನ್ನು ಪಡೆಯಲು ಬೇಕಾದ ಜ್ಞಾನ ಹಾಗೂ ಕೌಶಲಗಳನ್ನು ಹೊಂದಿರುವವರು ಕಡಿಮೆ ಇದ್ದಾರೆ. ಅತಿಯಾದ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳು ಹಾಗೂ ಗೇಮಿಂಗ್ನಂತಹ ಗೀಳುಗಳು ಯುವಕರನ್ನು ದಾರಿತಪ್ಪಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಧನೆಗೆ ಬೇಕಾದ ಕನಸು ಕಾಣುವ ಗುಣ, ಛಲ ಹಾಗೂ ಶ್ರಮಿಸುವ ಗುಣ ಇದ್ದಾಗ ಮಾತ್ರ ಯುವಕರು ಮುಂದೆ ಬರಲು ಸಾಧ್ಯ. ಹೀಗಾಗಿ ಈ ಮೂರು ಗುಣಗಳನ್ನು ಕಟ್ಟಿಕೊಂಡೇ ವಿದ್ಯಾರ್ಥಿಗಳು ಪದವಿ ಮುಗಿಸಿಕೊಂಡು ಕಾಲೇಜಿನಿಂದ ಹೊರಬರಬೇಕು ಎಂದು ಹೇಳಿದರು.

‘ಸಿಂಧನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪನ್ಮೂಲ ವ್ಯಕ್ತಿ ಶರಣಪ್ಪ ಹೊಸಳ್ಳಿ ಮಾತನಾಡಿ, ತಕ್ಷಣಕ್ಕೆ ಸಿಗುವ ಸಣ್ಣ-ಸಣ್ಣ ಸುಖಗಳು ಜೀವನಕ್ಕೆ ಬೇಕಾದ ದೊಡ್ಡ ಸುಖವನ್ನೇ ಕಸಿದುಕೊಳ್ಳುತ್ತವೆ. ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳನ್ನು ಬರೀ ಮೋಜು, ಮಸ್ತಿಯಲ್ಲಿ ಕಾಲಹರಣ ಮಾಡದೇ, ಜೀವನಕ್ಕೆ ಬೇಕಾದ ಜ್ಞಾನ ಹಾಗೂ ಕೌಶಲಗಳನ್ನು ಕಟ್ಟಿಕೊಳ್ಳಲು ಬಳಸಿಕೊಳ್ಳಬೇಕು’ ಎಂದು ಹೇಳಿದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಜರಂಗಬಲಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಇಲ್ಲಿನ ಪದವಿ ಕಾಲೇಜು ಹೆಚ್ಚು ಅನುಕೂಲಕರವಾಗಿದ್ದು, ಈ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕೂಡ ಹೆಚ್ಚಾಗುತ್ತಿದೆ. ಉನ್ನತ ಶಿಕ್ಷಣ ಪಡೆಯುವ ಆಸೆ-ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ನಾತಕೋತ್ತರ ಕೇಂದ್ರವನ್ನು ಕೊಪ್ಪಳ ವಿಶ್ವವಿದ್ಯಾಲಯ ನೀಡಿದರೆ ಈ ಭಾಗದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಸಹಾಯಕವಾಗಲಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥೆ ಲಲಿರಾ.ಎನ್.ಕೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ಜ್ಞಾನ ಸ್ಪೂರ್ತಿ’ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಭಾಗದ ಉಪನ್ಯಾಸಕ ವಿಜಯ ಸರೋದೆ, ಸಹಾಯಕ ಪ್ರಾಧ್ಯಾಪಕರಾದ ರಕ್ಷಿತ್.ಎ, ವೀರೇಶ ಕೆಂಗಲ್, ಸರ್ವಮಂಗಳಮ್ಮ. ಟಿ.ಆರ್, ನಫೀಸ್ ಬಾನು, ಸಂಗಮೇಶ, ಉಪನ್ಯಾಸಕ ಅಮರೇಶ್.ವಿ ಇದ್ದರು. ವಿದ್ಯಾರ್ಥಿಗಳಾದ ಮೇಘ ಹಾಗೂ ಸುರೇಶ್ ಪ್ರಾರ್ಥಿಸಿದರು, ಸಮೀರ್ ಸಾಬ್ ಹಾಗೂ ಹುಸೇನಬಿ ಸ್ವಾಗತಿಸಿದರು, ಚನ್ನಮ್ಮ ಹಾಗೂ ಮಂಜುನಾಥ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-35-641157123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.