ಕನಕಗಿರಿ: ಅಪೂರ್ಣ ದಾಖಲೆಗಳನ್ನು ಸಲ್ಲಿಸಿ ಅತಿಥಿ ಉಪನ್ಯಾಸಕ ಹುದ್ದೆ ಪಡೆದುಕೊಂಡ ವ್ಯಕ್ತಿಯ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿಕಟ ಪೂರ್ವ ಅತಿಥಿ ಉಪನ್ಯಾಸಕರು ಕಾಲೇಜಿನ ಎಸ್ಒಪಿ ಪ್ರಾಧ್ಯಾಪಕರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರ್ಹತೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಕಾಲೇಜಿನ ಎಸ್ಒಪಿ ಸಮಿತಿಗೆ ಸರ್ಕಾರ ಅಧಿಕಾರ ವಹಿಸಿದೆ. ಅತಿಥಿ ಉಪನ್ಯಾಸಕರೊಬ್ಬರು ಅಪೂರ್ಣ ಪ್ರಮಾಣದ ದಾಖಲೆಗಳನ್ನು ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಉಪನ್ಯಾಸಕನ ಅರ್ಹತೆಯ ಪ್ರಮಾಣ ಪತ್ರಗಳನ್ನು ಮಾಹಿತಿ ಹಕ್ಕಿನಲ್ಲಿ ಪಡೆದುಕೊಂಡಿದ್ದು, ಒಂದು ವರ್ಷದ ಸೇವಾನುಭವದ ಕೊರತೆ ಇದೆ. ಸಿಂಧನೂರು ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಥಮ ದರ್ಜೆ ಸಹಾಯಕರು ಸೇರಿ ದಾಖಲೆ ನೀಡಿದ್ದಾರೆ ಎಂದು ತಿಳಿಸಿದರು.

ನೇಮಕಗೊಂಡ ಉಪನ್ಯಾಸಕನ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿಕಟಪೂರ್ವ ಅತಿಥಿ ಉಪನ್ಯಾಸಕರಾದ ಬಾಳಪ್ಪ ಸುಳೇಕಲ್, ಗೋಪಾಲರೆಡ್ಡಿ, ಎಸ್ಒಪಿ ಸಮಿತಿಯ ಸಹಾಯಕ ಪ್ರಾಧ್ಯಾಪಕ ರಕ್ಷಿತ್ ಎ, ವೀರೇಶ್ ಕೆಂಗಲ್, ಸರ್ವಮಂಗಳಮ್ಮ ಟಿ.ಆರ್, ಸಂಗಮೇಶ, ನಿಕಟಪೂರ್ವ ಅತಿಥಿ ಉಪನ್ಯಾಸಕ ಮಾರುತೇಶ, ಪ್ರಮುಖರಾದ ಕನಕಪ್ಪ ವಜ್ರಬಂಡಿ, ಕಿರಣಕುಮಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-35-2014955759

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.