ಕನಕಗಿರಿ: ‘ಸೇವೆಯೇ ಪರಮ ಧರ್ಮ’ ಎಂಬ ತತ್ವಕ್ಕೆ ರೆಡ್ ಕ್ರಾಸ್ ಜೀವಂತ ಉದಾಹರಣೆಯಾಗಿದ್ದು, ಪ್ರಕೃತಿಯ ವಿಕೋಪದಿಂದ ಜಗತ್ತು ತತ್ತರಿಸಿದಾಗ ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಓಡಿ ಬಂದು ಸೇವೆ ಮಾಡುವ ಸಂಸ್ಥೆಯೇ ರೆಡ್ ಕ್ರಾಸ್’ ಎಂದು ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ ತಿಳಿಸಿದರು.

ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ಕ್ರಾಸ್ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ರೆಡ್ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದರು.

‘ಯುದ್ಧ ಭೂಮಿಯಲ್ಲಿ ಗಾಯಗೊಂಡ ಶತ್ರು ಸೈನಿಕನಿಗೂ ಚಿಕಿತ್ಸೆ ನೀಡುವ ಈ ಸಂಸ್ಥೆಯ ಗುಣವು ‘ದ್ವೇಷಕ್ಕಿಂತ ಮಾನವೀಯತೆ ದೊಡ್ಡದು’ ಎಂಬ ಸಂದೇಶವನ್ನು ಸಾರುತ್ತದೆ. ಇದು ರಾಷ್ಟ್ರಗಳ ನಡುವೆ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸಲು ಪರೋಕ್ಷವಾಗಿ ಶ್ರಮಿಸುತ್ತಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ಬಜರಂಗಬಲಿ ಮಾತನಾಡಿ, ರಸ್ತೆ ಅಪಘಾತಗಳಾದಾಗ ಗಾಯಾಳುಗಳನ್ನು ರಕ್ಷಿಸದೇ ಫೋಟೋ ತೆಗೆಯುವುದನ್ನು ವಿಷಯವನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಅಪಾಯದಲ್ಲಿರುವವರನ್ನು ರಕ್ಷಿಸುವ ಮನೋಭಾವ ಇರಬೇಕೇ ಹೊರತು ಮಾನವೀಯತೆಯನ್ನು ಮರೆತು ನಿಲ್ಲುವ ಗುಣವಲ್ಲ’ ಎಂದು ತಿಳಿಸಿದರು.

ರೆಡ್ಕ್ರಾಸ್ ಘಟಕದ ಸಂಯೋಜಕಿ ಸರ್ವಮಂಗಳಮ್ಮ ಟಿ.ಆರ್ ಮಾತನಾಡಿದರು.

ರೆಡ್ ಕ್ರಾಸ್ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಚೈತ್ರಾ.ಕೆ ಪ್ರಥಮ ಸ್ಥಾನ, ಶಶಿಕಲಾ ದ್ವಿತೀಯ, ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ ರತ್ನಮ್ಮ ಪ್ರಥಮ ಹಾಗೂ ಶೋಭಾ ದ್ವಿತೀಯ, ಭಾಷಣ ಸ್ಪರ್ಧೆಯಲ್ಲಿ ಸಾನಿಯಾ ಪ್ರಥಮ ಹಾಗೂ ಚೈತ್ರಾ.ಕೆ ದ್ವಿತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜಿನ ವಿವಿಧ ಘಟಕಗಳ ಸಂಯೋಜಕರಾದ ರಕ್ಷಿತ್.ಎ, ಲಲಿತಾ.ಎನ್.ಕೆ, ವೀರೇಶ ಕೆಂಗಲ್, ನಫೀಸ್ ಬಾನು, ಸಂಗಮೇಶ, ಉಪನ್ಯಾಸಕ ಸೋಮಶೇಖರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-35-1686325371

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.