ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 2025–26ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದೆ.

ಜ.30ರಿಂದ ಫೆ.1ರವರೆಗೆ ರಾಜ್ಯದಾದ್ಯಂತ 13 ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಯನ್ನು ಒಟ್ಟು 996 ಅಭ್ಯರ್ಥಿಗಳು ಎದುರಿಸಿದ್ದರು. ‘ಕನ್ನಡ ಪ್ರವೇಶ’ ಪರೀಕ್ಷೆಗೆ ಹಾಜರಾಗಿದ್ದ 414 ಅಭ್ಯರ್ಥಿಗಳಲ್ಲಿ 339 ಮಂದಿ (ಶೇ 81.88) ತೇರ್ಗಡೆಯಾಗಿದ್ದಾರೆ. ಅರ್ಚನಾ ಬಸವರಾಜ ಬಿರಾದಾರ ಪ್ರಥಮ ರ್ಯಾಂಕ್, ಶ್ರೇಯಸ್ ರಾಜು ಗುರುವ ದ್ವಿತೀಯ ರ್ಯಾಂಕ್ , ಅಥರ್ವ ಮಡಿವಾಳೇಶ್ವರ ಹಲಕಿ ತೃತೀಯ ರ್ಯಾಂಕ್ ಪಡೆದಿದ್ದಾರೆ.

‘ಕನ್ನಡ ಕಾವ’ ಪರೀಕ್ಷೆ ಬರೆದ 367 ಅಭ್ಯರ್ಥಿಗಳಲ್ಲಿ 253 ಮಂದಿ (ಶೇ 68.94) ಉತ್ತೀರ್ಣರಾಗಿದ್ದಾರೆ. ರಾಮು ಎಂ.ಎಸ್. ಪ್ರಥಮ ರ್ಯಾಂಕ್, ರಘುವೀರ್ ಎಂ.ಎನ್. ದ್ವಿತೀಯ ರ್ಯಾಂಕ್, ಧನ್ಯ ಎಚ್.ಯು. ತೃತೀಯ ರ್ಯಾಂಕ್ ಗಳಿಸಿದ್ದಾರೆ.

‘ಕನ್ನಡ ಜಾಣ’ ಪರೀಕ್ಷೆಗೆ 30 ಅಭ್ಯರ್ಥಿಗಳು ಹಾಜರಾಗಿದ್ದು, 22 ಮಂದಿ (ಶೇ 73.33) ತೇರ್ಗಡೆಯಾಗಿದ್ದಾರೆ. ನಿಕಿತಾ ಹನುಮಂತ ದೊಡ್ಡಗೌಡರ ಪ್ರಥಮ ರ್ಯಾಂಕ್, ತನ್ವೀರ್ ನ. ಮುಜಾವರ್ ದ್ವಿತೀಯ ರ್ಯಾಂಕ್ ಹಾಗೂ ವೈಷ್ಣವಿ ಯಲ್ಲಪ್ಪ ಚೂರಿ ಮಾತನವರ ತೃತೀಯ ರ್ಯಾಂಕ್ ಪಡೆದಿದ್ದಾರೆ.

‘ಕನ್ನಡ ರತ್ನ’ ಪರೀಕ್ಷೆಗೆ 52 ಅಭ್ಯರ್ಥಿಗಳು ಹಾಜರಾಗಿದ್ದು, 40 ಅಭ್ಯರ್ಥಿಗಳು (ಶೇ 76.92) ಉತ್ತೀರ್ಣರಾಗಿದ್ದಾರೆ. ಪೂರ್ಣಿಮಾ ಪ್ರಕಾಶ ಮಾತನವರ ಪ್ರಥಮ ರ್ಯಾಂಕ್, ನಿತ್ಯಾ ಹರೀಶ ಕಟ್ಟಿ ದ್ವಿತೀಯ ರ್ಯಾಂಕ್, ಅಂಕಿತಾ ಲಹರಿ ಎಂ.ಎನ್. ತೃತೀಯ ರ್ಯಾಂಕ್ ಗಳಿಸಿದ್ದಾರೆ.

‘ಈ ಎಲ್ಲ ಪರೀಕ್ಷೆಗಳು ಲಕ್ಷಾಂತರ ಕನ್ನಡಿಗರಲ್ಲಿ ಭಾಷೆ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಫಲಿತಾಂಶವನ್ನು ಪರಿಷತ್ತಿನ ಅಂತರ್ಜಾಲ ತಾಣ www.kasapa.in ಮೂಲಕ ಸಹ ಪಡೆದು ಕೊಳ್ಳಬಹುದು’ ಎಂದು ಕಸಾಪ ಆಡಳಿತಾಧಿಕಾರಿ ಕೆ.ಎ. ದಯಾನಂದ ತಿಳಿಸಿದ್ದಾರೆ. ಸಂಪರ್ಕಕ್ಕೆ: 080 26612991 ಅಥವಾ 22423867

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-35-1319616853

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.