ಚನ್ನಗಿರಿ: ‘ಕನ್ನಡ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ಸಂವರ್ಧನೆಗೆ ಶತಮಾನಗಳಿಂದಲೂ ಪ್ರಾಮಾಣಿಕ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಶ್ಲಾಘನೀಯವಾದುದು’ ಎಂದು ಸಂಸ್ಕೃತಿ ಚಿಂತಕ ಎಂ.ಯು.ಚನ್ನಬಸಪ್ಪ ತಿಳಿಸಿದರು.

ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗುವ ಸಾಹಿತ್ಯ ಸಮ್ಮೇಳನ, ದತ್ತಿ ಕಾರ್ಯಕ್ರಮ, ಕವಿಗೋಷ್ಠಿ, ವಿಚಾರ ಸಂಕಿರಣ, ಪ್ರಗತಿಪರ, ದಲಿತಪರ, ಕೃಷಿಪರ ಹಾಗೂ ಮಹಿಳಾ ಚಿಂತನಾ ಗೋಷ್ಠಿಗಳು ಸರ್ವಕಾಲಕ್ಕೂ ಮಹತ್ವಪೂರ್ಣ ಆಗಿವೆ ಎಂದರು.

‘ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಕನ್ನಡ ಸಾರಸ್ವತ ಲೋಕದ ನಾಡಗುಡಿ ಎಂದೇ ಜನಮನ್ನಣೆ ಪಡೆದಿದೆ. ನುಡಿ, ಗಡಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಹಾಗೂ ಪ್ರಭುತ್ವವನ್ನು ಸತತವಾಗಿ ಎಚ್ಚರದಲ್ಲಿಡುವ ಕಾಯಕವನ್ನು ಮಾಡುತ್ತಿದೆ’ ಎಂದು ಎಲ್.ಜಿ. ಮಧುಕುಮಾರ್ ತಿಳಿಸಿದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಎಂ. ಉಜ್ಜನಪ್ಪ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಜಿ. ಚಿನ್ನಸ್ವಾಮಿ, ಬಿ.ಈ.ಸಿದ್ದಪ್ಪ, ಮಾದೇನಹಳ್ಳಿ ಓಂಕಾರಮೂರ್ತಿ, ಮಲ್ಲಿಕಾರ್ಜುನ್, ಮಣ್ಣಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ರವಿಕುಮಾರ್, ಇಸ್ಮಾಯಿಲ್, ರುದ್ರಪ್ಪ, ರವಿಪ್ರಕಾಶ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-43-1824024855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.