ಬ್ರಹ್ಮಾವರ: ಇಲ್ಲಿನ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಆರೋಹ 2026’ ಸಮಾರೋಪ ಸಮಾರಂಭ ಈಚೆಗೆ ಜರುಗಿತು.

ಕಾರ್ಕಳದ ಮಂಜುನಾಥ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಬಹುಮಾನ ಪಡೆದು ₹40 ಸಾವಿರ ನಗದು ಹಾಗೂ ಟ್ರೋಫಿ ಗೆದ್ದುಕೊಂಡಿತು. ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜು ದ್ವಿತೀಯ, (₹30 ಸಾವಿರ ನಗದು, ಟ್ರೋಫಿ), ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜು ತೃತೀಯ (₹20 ಸಾವಿರ ನಗದು, ಟ್ರೋಫಿ) ಬಹುಮಾನ ಪಡೆದವು.

ಕಾಲೇಜಿನ ಹಳೆ ವಿದ್ಯಾರ್ಥಿ, ಕಿರುತೆರೆ ನಟ ಪುನೀತ್ ಶೆಟ್ಟಿ ಮಾತನಾಡಿ, ‘ನಾನು ಇದೇ ಕಾಲೇಜಿನಲ್ಲಿ ಓದುತ್ತಿದ್ದಾಗ ಆರೋಹ ಕಾರ್ಯಕ್ರಮದ ನೆನಪುಗಳು ಹಸಿರಾಗಿವೆ. ವಿದ್ಯಾರ್ಥಿಗಳು ಬದುಕಿನಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು. ಅವುಗಳನ್ನು ಛಲದಿಂದ ಬೆನ್ನತ್ತಿ ಹೋದರೆ ಯಶಸ್ಸು ಪಡೆಯಲು ಸಾಧ್ಯ’ ಎಂದರು.

ಕೃಷಿಕ ಜಯರಾಮ ಶೆಟ್ಟಿ ಅವರು ವಿದ್ಯಾರ್ಥಿಗಳ ಸಾಂಘಿಕ ಪ್ರಯತ್ನ, ಪ್ರತಿಭೆಯನ್ನು ಶ್ಲಾಘಿಸಿದರು. ಪ್ರಾಂಶುಪಾಲ ರಾಜೇಂದ್ರ ಎಸ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡೆನಿಸ್ ಬಾಂಜೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ವಿಜಯಾ ಶುಭ ಹಾರೈಸಿದರು.

ವಿದುಷಿ ದೀಕ್ಷಾ ವಿ, ನಿತಿನ್ ಶೆಟ್ಟಿ, ಗೋಪಾಲ ಗಾಣಿಗ ತೀರ್ಪುಗಾರರಾಗಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಮೇಶ್ ಆಚಾರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-28-439774725

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.