ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿ | ಕಲಾ ವಿಭಾಗ: ಕೂಲಿ ಕೆಲಸ ಮಾಡುವ ಶಿವರಾಜಗೆ 2ನೇ ರ‍್ಯಾಂಕ್‌

ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಸ್ನೇಹಿತರಿಂದ ಸಂಭ್ರಮಾಚರಣೆ
Last Updated 18 ಜೂನ್ 2022, 20:00 IST
ಅಕ್ಷರ ಗಾತ್ರ

ನರೇಗಲ್ (ಗದಗ): ಇಲ್ಲಿನ ಅನ್ನದಾನೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿ ಶಿವರಾಜ ದುರ್ಗಪ್ಪ ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 593 (ಶೇ 98.83) ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.

ಜೂನ್‌ 18ರಂದು ಫಲಿತಾಂಶ ಪ್ರಕಟವಾದಾಗ ಶಿವರಾಜ, ತುಮಕೂರು ಜಿಲ್ಲೆಯ ಆದರ್ಶನಗರದಲ್ಲಿರುವ ಅಮಾನಿಕೆರೆಯ ಹತ್ತಿರ ನಡೆದಿರುವ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಬಾರ್‌ಬೆಂಡಿಂಗ್‌ ಕೆಲಸ ಮಾಡುತ್ತಿದ್ದರು. ಕಾಲೇಜಿನ ಪ್ರಾಚಾರ್ಯ ವೈ.ಸಿ.ಪಾಟೀಲ ಫೋನ್‌ ಕರೆ ಮಾಡಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಮಾಹಿತಿ ನೀಡಿದ್ದಾರೆ. ಶಿವರಾಜ ಅವರು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಯಲಗಟ್ಟಾ ಗ್ರಾಮದವರು.

‘ತಂದೆ–ತಾಯಿ ಕೂಲಿ ಕೆಲಸ ಮಾಡುತ್ತಾರೆ. ಆಗಾಗ ಗುಳೆ ಹೋಗುತ್ತಾರೆ. ಕಾಲೇಜಿಗೆ ರಜೆ ಇದ್ದಾಗ ಗಾರೆ, ಬಾರ್‌ಬೆಂಡಿಂಗ್‌ ಕೆಲಸ ಮಾಡುತ್ತೇನೆ. ತುಮಕೂರಿನಲ್ಲಿ ದಿನಕ್ಕೆ ₹400 ಕೂಲಿ ಕೊಡುವ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ’ ಎಂದು ಶಿವರಾಜ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಿವರಾಜನ ವಿದ್ಯಾಭ್ಯಾಸ ಹಾಗೂ ಐಎಎಸ್ ವರೆಗಿನ ಕಲಿಕಾ ವೆಚ್ಚನ್ನು ಸಂಪೂರ್ಣವಾಗಿ ಮಠದಿಂದ ಭರಿಸಲಿದ್ದೇವೆ’ ಎಂದುಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT