ಕಡೂರು: ‘ಪ್ರಬುದ್ಧ ಭಾರತ ನಿರ್ಮಾಣವಾಗಲು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವು ನೆರವಾದಂತೆ, ಅವರ ವಿಚಾರಧಾರೆಯು ಜಗತ್ತಿನ ಶೋಷಿತ ಸಮುದಾಯಗಳ ಏಳಿಗೆಯ ದಾರಿದೀಪವಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಬಣದ ಜಿಲ್ಲಾ ಸಮಿತಿ ಸಂಚಾಲಕ ಎಲ್.ಎಸ್. ಶ್ರೀಕಾಂತ್ ಹೇಳಿದರು.

ಹಿರೇನಲ್ಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಗ್ರಾಮದ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಅಂಬೇಡ್ಕರ್ ಅವರ 135ನೇ ಮತ್ತು ಬಿ. ಬಸವಲಿಂಗಪ್ಪ ಅವರ 103ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಸಹಬಾಳ್ವೆ ಮೂಡಲು ಎಲ್ಲರೂ ಸ್ವಾತಂತ್ರ್ಯ, ಸಮಾನತೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾಗಲು ಅವಕಾಶಗಳು ಬೇಕು. ಶಿಕ್ಷಣದಿಂದ ಇದು ಸಾಧ್ಯವಾಗಲಿದ್ದು, ದಲಿತ ಮತ್ತು ಹಿಂದುಳಿದ ಸಮುದಾಯಗಳು ಶಿಕ್ಷಣದ ಮೂಲಕ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅದನ್ನು ಸಾಕಾರಗೊಳಿಸಲು ಹಳ್ಳಿ ಹಳ್ಳಿಗಳಲ್ಲಿ ಶಿಕ್ಷಣವೇ ಸಬಲೀಕರಣದ ಮಂತ್ರವಾಗಬೇಕು ಎಂದು ಆಶಿಸಿದರು.

ಅಂಬೇಡ್ಕರ್ ಅವರಂತೆಯೇ ಪ್ರಖರ ವಿಚಾರಧಾರೆಯ ಬಿ. ಬಸವಲಿಂಗಪ್ಪ ಅವರನ್ನು ದಲಿತ ಸಮುದಾಯಗಳ ಕರ್ನಾಟಕದ ಪಾಲಿನ ಮೇರು ವ್ಯಕ್ತಿತ್ವ ಎಂದು ಪರಿಗಣಿಸಬೇಕು. ಬಸವಲಿಂಗಪ್ಪ ಅವರ ಸಾಮಾಜಿಕ ಬದ್ಧತೆಗೆ ಅಂಬೇಡ್ಕರ್ ಅವರು ಮಾತ್ರವಲ್ಲದೆ, ಬುದ್ಧ ಮತ್ತು ಬಸವಣ್ಣ ಅವರ ಬದುಕು ಹಾಗೂ ಸಮಾಜವಾದಿ ಚಿಂತನೆಗಳೂ ಮುಖ್ಯ ಕಾರಣ. ಅವರು ವಿವಿಧ ಇಲಾಖೆ ಸಚಿವರಾಗಿ, ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು ಎಂದರು.

1978ರಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಭೂಮಿ ಪರಬಾರೆ ನಿಷೇಧ, ದೇವದಾಸಿ ಪದ್ಧತಿಯ ತಡೆಗೆ ಶ್ರಮಿಸಿ ಮಹಿಳಾ ಶೋಷಣೆಯನ್ನು ತಡೆದು ಅವರ ಬದುಕಿನಲ್ಲಿ ಬದಲಾವಣೆ ತರುವಲ್ಲಿ ಮುಂದಾದರು. ಸ್ವಚ್ಛತಾ ಕಾರ್ಮಿಕರು ಗ್ರಾಮ, ಪಟ್ಟಣ, ನಗರ ಮತ್ತು ಮಹಾನಗರಗಳ ಸ್ವಚ್ಛತೆಯ ಪ್ರತೀಕವಾಗಿರುವುದರಿಂದ ಇವರನ್ನು ಇನ್ನು ಮುಂದೆ ಪೌರಕಾರ್ಮಿಕರು ಎಂದು ಗುರುತಿಸಲು ಪೌರಾಡಳಿತ ಮಂತ್ರಿಯಾಗಿದ್ದ ಸಮಯದಲ್ಲಿ ಆದೇಶಿಸಿದ್ದರು. ದೇಶಕ್ಕೆ ಕೊಟ್ಟ ಈ ಕೊಡುಗೆಗಳಿಂದಾಗಿ ಬಿ. ಬಸವಲಿಂಗಪ್ಪ ಅವರನ್ನು ‘ಸ್ವಚ್ಛ ಭಾರತದ ಪಿತಾಮಹ’ ಎಂದು ಕರೆಯಲಾಗುತ್ತದೆ ಎಂದು ಅವರು ತಿಳಿಸಿದರು.

ಗ್ರಾಮದ ಮುಖಂಡರಾದ ನರೇಂದ್ರ, ಬಸವರಾಜ್, ಶಿಕ್ಷಕರಾದ ಮೃತ್ಯುಂಜಯಪ್ಪ, ಬಸವರಾಜಪ್ಪ, ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ರವಿಶಂಕರ್, ಗ್ರಾಮಸ್ಥರಾದ ಸತೀಶ್, ಎಂ.ಕೆ. ಶ್ರೀನಿವಾಸ್, ಗಂಗಮ್ಮ, ಲಾವಣ್ಯ, ರಂಜಿತ, ಸುಧಾ, ಪುಟ್ಟಮ್ಮ, ಮಾಳಮ್ಮ, ಕಲ್ಯಾಣಮ್ಮ, ಸಾಗರ್, ಚಂದನ, ಆಕಾಶ್, ನವೀನ್, ಚೇತನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-126-2124985512

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.