ಸುಮಂಗಲಾ

‘ನಾವು ಹೈಸ್ಕೂಲಿನಲ್ಲಿದ್ದಾಗ ಮೂರನೇ ಭಾಷೆ ಹಿಂದಿ ಉರು ಹೊಡೆದು ಕಷ್ಟಬಿದ್ದು ಪಾಸಾಗಿದ್ದವಿ. ಸದ್ಯ... ಈಗ ಅದೇನೋ ಗ್ರೇಡಿಂಗ್ ವ್ಯವಸ್ಥೆ ಮಾಡ್ಯಾರಂತೆ’ ಎಂದೆ ಸುದ್ದಿ ಓದುತ್ತ.

‘ಹಿಂದಿ ಕಲೀದಿದ್ದವರು ಹಿಂದುಳಿತಾರೆ, ತಿಳಕೋ!’ ಎಂದು ಬೆಕ್ಕಣ್ಣ ಮೂತಿ ಮುರಿಯಿತು.

‘ಹೋಗಲೇ... ಮಾತೃಭಾಷೆ ಕನ್ನಡ, ಹೊರಗಿನ ವ್ಯವಹಾರಕ್ಕೆ ಇಂಗ್ಲಿಷ್, ಎರಡು ಸಾಕು. ಹುಡುಗ್ರು ಬದುಕಿನ ಭಾಷೆ ಕಲೀಬಕು’ ಎಂದೆ.

‘ನಮ್ ಹುಡುಗ್ರು ಐಎಎಸ್, ಐಪಿಎಸ್ ಹಿಂತಾದೆಲ್ಲ ಮಾಡಿ, ಉತ್ತರ ಭಾರತದ ಕಡಿಗಿ ಕೆಲಸ ಮಾಡಕ್ಕೆ ಹೋದ್ರೆ ಹಿಂದಿ ಬರಲಿಕ್ಕಂದ್ರ ಏನು ಕಥಿ? ಅಲ್ಯಾವ ಭಾಷೆ ಮಾತಾಡತಾರೆ?’ ಬೆಕ್ಕಣ್ಣ ಜೋರಾಗಿ ವಾದಿಸಿತು.

‘ಅವ್ರು ಐಎಎಸ್, ಐಪಿಸ್ಸಿಗೆ ಕೋಚಿಂಗ್ ತಗಳೂವಾಗ ಹಿಂದಿನೂ ಕಲಿತಾರೇಳು. ಉತ್ತರ ಭಾರತದ ಕಡಿಂದ ಪ್ರತಿವರ್ಷ ಲಕ್ಷಗಟ್ಟಲೆ ಮಂದಿ ಬೆಂಗಳೂರಿಗೆ ಕೆಲಸ ಮಾಡಕ್ಕೆ ಬರತಾರೆ. ಬಂದೋರು ಇಲ್ಲೆ ಸೆಟಲ್ ಆಗತಾರೆ. ಹಿಂಗಾಗಿ ಅಲ್ಲಿ ಸಾಲಿವಳಗೆ ಕನ್ನಡ ಕಲಿಸಬಕು’ ಎಂದೆ.

‘ಹಿಂದಿ ರಾಷ್ಟ್ರಭಾಷೆ... ನೆಹರೂ, ಇಂದಿರಾಗಾಂಧಿ ಎಲ್ಲಾರೂ ತ್ರಿಭಾಷಾ ಸೂತ್ರ ಹೇಳಿದ್ದರು’ ಬೆಕ್ಕಣ್ಣ ಗುರುಗುಟ್ಟಿತು.

‘ಉಳಿದೆಲ್ಲ ವಿಚಾರಕ್ಕೆ ನೆಹರೂ, ಇಂದಿರಾಗಾಂಧಿಗೆ ಬೈತಾ ಇರತೀಯ. ತ್ರಿಭಾಷಾ ಸೂತ್ರಕ್ಕೆ ಮಾತ್ರ ಅವರು ನೆನಪಾಗತಾರೇನು? ಉತ್ತರದವರು ದಕ್ಷಿಣ ಭಾರತದ ಒಂದು ಭಾಷೆ ಕಲಿಬಕು ಅಂತನೂ ನೆಹರೂ ಹೇಳಿದ್ದರು.’ ನಾನು ನೆನಪಿಸಿದೆ.

‘ಅಲ್ಲಿ ದಕ್ಷಿಣ ಭಾರತದ ಭಾಷೆ ಮಾತಾಡೋರು ಯಾರೂ ಇಲ್ಲವಲ್ಲ!’ ಬೆಕ್ಕಣ್ಣ ನಕ್ಕಿತು.

‘ಮತ್ತ ಇಲ್ಲಿ ಹಿಂದಿ ಮಾತಾಡೋರು ಯಾರದಾರೆ? ಉತ್ತರದವ್ರಿಗೆ ದ್ವಿಭಾಷೆ, ಕರುನಾಡಿಗೆ ತ್ರಿಭಾಷೆ! ಇದ್ಯಾವ ನ್ಯಾಯ? ಅಲ್ಲಿಯ ಸಾಲಿವಳಗೆ ದಕ್ಷಿಣ ಭಾರತದ ಒಂದು ಭಾಷೆ ಕಲಿಸಿದರೆ ಅವ್ರಿಗೇ ಲಾಭ. ಎದಕ್ಕಂದ್ರ ಸಾಲಿ ಕಲಿತ ಅರ್ಧಕ್ಕರ್ಧ ಮಂದಿ ದಕ್ಷಿಣದ ಕಡಿಗಿ ಕೆಲಸಕ್ಕೆ ಬರತಾರೆ.’ ನಾನು ಪಟ್ಟುಬಿಡದೇ ವಾದಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-51-2057893683

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.