ಕಾರವಾರ: ‘ದೇಸಿ ಕಲೆಗಳು, ಭಾರತೀಯ ಮೌಲ್ಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಿ, ಮುಂದಿನ ಪೀಳಿಗೆಗೆ ಸಂಸ್ಕೃತಿ ವರ್ಗಾಯಿಸುವ ಕೆಲಸ ಆಗಬೇಕಿದೆ’ ಎಂದು ಕರ್ನಾಟಕ ವನವಾಸಿ ಕೇಂದ್ರಗಳ ಸಂಚಾಲಕ ರಾಮಚಂದ್ರ ಹೇಳಿದರು.

ತಾಲ್ಲೂಕಿನ ಕೈಗಾದ ವನವಾಸಿ ಸಮಿತಿಯ ಮಾತೃಮಂಡಲದ ವತಿಯಿಂದ ಹಮ್ಮಿಕೊಂಡಿರುವ ಓಜಸ್ ಬೇಸಿಗೆ ಶಿಬಿರಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಥೆಗಳ ಮೂಲಕ ಭಾರತೀಯ ಮೌಲ್ಯಗಳನ್ನು ಶಿವಾಜಿಗೆ ತಿಳಿಸಿದ ಜೀಜಾಬಾಯಿಯಂತೆ ಇಂದಿನ ತಾಯಂದಿರು ತಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ಆ ಮೂಲಕ ನಮ್ಮ ಮೌಲ್ಯಗಳನ್ನು ಉಳಿಸುವ ಕೆಲಸ ತಾಯಂದಿರಿಂದ ಮಾತ್ರ ಸಾಧ್ಯವಿದೆ’ ಎಂದರು.

ಪರಿಸರ ಜಾಗೃತಿಗಾಗಿ ನಿಸರ್ಗ ನಡಿಗೆ ಮತ್ತು ಪರಿಸರ ಸ್ನೇಹಿ ಪುಸ್ತಕ ಬೈಂಡಿಂಗ್, ಬ್ಯಾಗ್ ತಯಾರಿಕೆ ಹಾಗೂ ಬುಕ್ ಮಾರ್ಕ್ ತಯಾರಿಕೆ, ಪ್ರಥಮ ಚಿಕಿತ್ಸೆ ಮತ್ತು ಸೈಬರ್ ಭದ್ರತೆ ಸೇರಿದಂತೆ ಹಲವು ಜೀವನ ಕೌಶಲ್ಯಗಳನ್ನು ಮಕ್ಕಳಿಗೆ ಪರಿಚಯಿಸಲಾಯಿತು.

ಕೈಗಾ ಅಣು ವಿದ್ಯುತ್ ಕೇಂದ್ರದ 1 ಮತ್ತು 2ನೇ ಘಟಕದ ಮುಖ್ಯ ಅಧೀಕ್ಷಕ ವಿ.ನಾಗರೀಕ್, 3 ಮತ್ತು 4ನೇ ಘಟಕದ ಮುಖ್ಯ ಅಧೀಕ್ಷಕಿ ನಾಚಮ್ಮಯಿ, ವನವಾಸಿ ಮಾತೃಮಂಡಳಿಯ ಅಧ್ಯಕ್ಷೆ ಕುಮುದಾ ನಾಗರೀಕ್, ಸಂಸ್ಥಾಪಕ ಸದಸ್ಯೆ ಸುಕನ್ಯಾ ಗುನಗ, ರಶ್ಮಿ ನಾಯಕ, ಸ್ನೇಹ ಮರಾಠೆ, ವಿಜಯಲಕ್ಷ್ಮಿ ಬಂಡಿಕಟ್ಟೆ, ಮನು ಗೌಡ, ಸೇವಾ ಕಾಮತ್, ಸುಜಾತಾ ಉಪಾಧ್ಯ, ತನುಜಾ ನಾಯ್ಕ, ಲಾವಣ್ಯ ಶ್ರೀನಿವಾಸ, ಶ್ರೀಮತಿ ಘೋರ್ಪಡೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-20-1594304085

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.