ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶಿಕ್ಷಣ ಸಂಸ್ಥೆಗಳಿಗೆ ಕಿನ್ನಿಗೋಳಿ ಅನುಗ್ರಹ ಸಹೋದರರು 60 ವರ್ಷ ಹಿಂದಿನ ಲೆಗ್ ಹಾರ್ಮೋನಿಯಂ, ಹಾರ್ಮೋನಿಯಂ, ತಬಲಾ ಮತ್ತು ಮದ್ದಲೆ ಕೊಡುಗೆಯಾಗಿ ನೀಡಿದರು.

ಸಂಗೀತ ಉಪಕರಣಗಳನ್ನು ಸ್ವೀಕರಿಸಿದ ಕಟೀಲು ದೇಗುಲದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ ಪುರಾತನವಾದುದು ಯಾವತ್ತಿಗೂ ಅಮೂಲ್ಯ. ಕಲಾಪ್ರಿಯಳಾದ ಕಟೀಲಮ್ಮನ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಈ ವಾದ್ಯಗಳು ಬಳಕೆಯಾಗಲಿವೆ ಎಂದರು.

ದಾನಿಗಳಾದ ವಾಸುದೇವ ರಾವ್, ನಿತ್ಯಾನಂದ ರಾವ್, ರಾಧಾಕೃಷ್ಣ ರಾವ್, ಗಣೇಶ್ ರಾವ್ ಕಿನ್ನಿಗೋಳಿ, ಉದ್ಯಮಿ ಜಯಕುಮಾರ ಮಯ್ಯ, ಹಾರ್ಮೋನಿಯಂ ಶಿಕ್ಷಕ ವಾಸು ಮಾಸ್ತರ್, ಕಟೀಲು ಶಿಕ್ಷಣ ಸಂಸ್ಥೆಗಳ ಮೇಲುಸ್ತುವಾರಿ ದಯಾನಂದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-29-263088164

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.