ಕಾಗವಾಡ: ಗಡಿ ಭಾಗದ ಅತಿ ಸಣ್ಣ ಗ್ರಾಮ ಕವಲಗುಡ್ಡ ಗ್ರಾಮದಲ್ಲಿ ಅಮರೇಶ್ವರ ಮಹಾರಾಜರು ಕನ್ನಡ ಮಾಧ್ಯಮ ಶಾಲೆ ಕಟ್ಟಿ ಬೆಳೆಸಿ ಶಿಕ್ಷಣ ಕ್ರಾಂತಿ ಮಾಡುತ್ತಿದ್ದಾರೆ. ಶಾಲೆಯ ಪ್ರಗತಿಗಾಗಿ ಸರ್ಕಾರದ ವತಿಯಿಂದ ₹1 ಕೋಟಿ ಮಂಜೂರು ಮಾಡಲು ಕ್ರಮ ಕೈಕೊಂಡಿರುವೆ’ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ತಾಲ್ಲೂಕಿನ ಕವಲಗುಡ್ಡ ಕರಿಯೋಗಿ ಸಿದ್ದಾಶ್ರಮದ ಆವರಣದಲ್ಲಿ ಭಾನುವಾರ ನಡೆದ ಕನಕ-ಬಸವ ಭಾವಬೆಳಕು ಕಾರ್ಯಕ್ರಮದಲ್ಲಿ ಶತಾಯುಷಿ ರೈತರ ಪಾದ ಪೂಜೆ, ಸಿದ್ದಶ್ರೀ ಅನುಭವ ಮಂಟಪ ಅಡ್ಡಿಗಲ್ಲು ಸಮಾರಂಭ ಸಿದ್ದರತ್ನ ಮದಗೊಂಡೇಶ್ವರ ಮಹಾರಾಜರ ಗುರು ಸ್ಮರಣೋತ್ಸವದ ಉದ್ಘಾಟಿಸಿ ಮಾತನಾಡಿದರು.

‘ಅಮರೇಶ್ವರ ಮಹಾರಾಜರು ಕವಲಗುಡ್ಡದಲ್ಲಿ ಅನೇಕ ಸಂತರ, ವಚನಕಾರರ ಭೋದನೆಗಳನ್ನು ಅದರಲ್ಲಿ ಕನಕದಾಸರು ಮತ್ತು ಬಸವೇಶ್ವರ ಚಿಂತನೆಗಳನ್ನು ಅಳವಡಿಸಿಕೊಂಡು ಪ್ರತಿವರ್ಷ ವಿನೂತನ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರು ಬರೀ ಮಠ ಸ್ಥಾಪನೆ ಮಾಡದೆ ಅದರ ಜೊತೆ ಬಡ ಅನಾಥ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಿದ್ದಾರೆ. ಅಮರೇಶ್ವರ ಸ್ವಾಮೀಜಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಪ್ರಗತಿಗೆ ನಮ್ಮಿಂದ ಆಗುವ ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತೇವೆ’ ಎಂದರು. ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ‘ನಾಡಿನಲ್ಲಿ ಉತ್ತಮ ಕಾರ್ಯ ಮಾಡುವ ಸ್ವಾಮೀಜಿಗಳ ಸಾಲಿನಲ್ಲಿ ಅಮರೇಶ್ವರ ಮಹಾರಾಜರು ಒಬ್ಬರು. ಮನುಷ್ಯನ ಮನಸ್ಸನ್ನು ಶುದ್ಧಿ ಮಾಡುವ ಕೇಂದ್ರಗಳೇ ಇಂದಿನ ಮಠ ಮಾನ್ಯಗಳಾಗಿವೆ. ಇಂತಹ ಮಠಗಳಲ್ಲಿ ಕವಲಗುಡ್ಡದ ಮಠವು ಒಂದಾಗಿದೆ. ರೈತರ ಪಾದಪೂಜೆ ಮಾಡಿ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ’ ಎಂದು ಹೇಳಿದರು. ಸಿರಿವಾಳದ ಸೋಮಲಿಂಗೇಶ್ವರ ಪಟ್ಟದ ಸ್ವಾಮೀಜಿ, ನಯಾನಗರದ ಅಭಿನವ ಸಿದ್ದಲಿಂಗೆಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಗಣೇಶ ಹುಕ್ಕೇರಿ, ಲಕ್ಷ್ಮಣರಾವ ಚಿಂಗಳೆ, ಬಸವರಾಜ ಬಸಳಿಗುಂದಿ, ಸತ್ಯಪ್ಪ ಬಾಗೆಣ್ಣವರ, ಸುರೇಶ ಮಾಯಣ್ಣವರ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-21-1162805593

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.