ಕೆಜಿಎಫ್: ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಎಂ.ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಬರ್ಟಸನ್ಪೇಟೆಯ ಸರ್ಕಾರಿ ಮಹಿಳಾ ಜ್ಯೂನಿಯರ್ ಕಾಲೇಜಿನಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಟಾರ್ಜನ್ ಘೋಷಿಸಿದರು.

ಉಪಾಧ್ಯಕ್ಷ ಎಸ್.ಎಂ.ತ್ಯಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ವಿ.ಶ್ರೀನಿವಾಸ್, ಸಹ ಕಾರ್ಯದರ್ಶಿ ಛಾಯಾದೇವಿ, ಖಜಾಂಚಿ ಕೆ.ಶ್ರೀನಿವಾಸ್, ಮಹಿಳಾ ಉಪಾಧ್ಯಕ್ಷೆ ಟಿ.ಭಾರತಿ ಆಯ್ಕೆಯಾಗಿದ್ದಾರೆ. ಆರ್.ನಾಗವೇಣಿ ಮತ್ತು ಜಿ.ಶ್ರೀನಿವಾಸಮೂರ್ತಿ ಅವರನ್ನು ಜಿಲ್ಲಾ ಸಮಿತಿಗೆ ನೇಮಕ ಮಾಡಲಾಗಿದೆ.

ಶಿಕ್ಷಕರ ಸಂಘಕ್ಕೆ ಎರಡು ಬಣಗಳು ತೀವ್ರ ಪೈಪೋಟಿ ಸಾಧಿಸಿದ್ದವು. ನಂತರ ಶಾಸಕಿ ಎಂ.ರೂಪಕಲಾ ಅವರು ಎರಡೂ ಬಣಗಳ ಜೊತೆ ಸಂಧಾನ ಮಾಡಿ ಎರಡೂ ಬಣಗಳಿಗೆ ಅಧಿಕಾರ ಹಂಚಿಕೆ ಸೂತ್ರ ಇಟ್ಟಿದ್ದರು. ಈ ಸೂತ್ರದ ಅಡಿಯಲ್ಲಿ ನಾರಾಯಣಸ್ವಾಮಿ ಅವರು ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿರುತ್ತಾರೆ. ನಂತರ ಮತ್ತೊಂದು ಗುಂಪಿನವರು ಅಧ್ಯಕ್ಷರಾಗುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-18-1954572133

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.