ಕಿಕ್ಕೇರಿ: ‘ಮಕ್ಕಳಿಗೆ ಓದಿನಷ್ಟೇ ಮನರಂಜನೆ ಮುಖ್ಯವಾಗಿದ್ದು, ಬೇಸಿಗೆ ಶಿಬಿರಗಳು ಮನಸ್ಸಿಗೆ ಉಲ್ಲಾಸ ನೀಡಲಿವೆ’ ಎಂದು ಕಿಕ್ಕೇರಿ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಬಿ.ಪಿ. ರಾಕೇಶ್ ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಿಂದ ಏರ್ಪಡಿಸಿರುವ ಗ್ರಾಮೀಣ ಮಕ್ಕಳಿಗೆ ಅಕ್ಕರೆಯ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

'ಗ್ರಾಮೀಣ ಮಕ್ಕಳಿಗೆ ಇಂತಹ ಶಿಬಿರ ಬಹಳ ಅವಶ್ಯಕತೆ ಇದೆ. ಸ್ಥಳೀಯ ಇತಿಹಾಸ, ಆಚಾರ, ವಿಚಾರ, ಸ್ಮಾರಕ ಮತ್ತಿತರ ಪರಿಚಯ ಸರಳವಾಗಿ ತಿಳಿಯಲಿದೆ. ಮನೋರಂಜನೆ, ಕಲಾತ್ಮಕ ಚಟುವಟಿಕೆ ವೃದ್ಧಿಸಲಿದೆ’ ಎಂದರು.

ಪಿಡಿಒ ಚಲುವರಾಜು ಮಾತನಾಡಿ, ‘34 ದಿವಸ ನಡೆಯುವ ಶಿಬಿರ ಭಾನುವಾರ ಹೊರತುಪಡಿಸಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ನಡೆಯಲಿದೆ. ಬಣ್ಣಗಳ ಪರಿಚಯ, ದೇಸಿ ಕ್ರೀಡೆ, ಅಂತ್ಯಾಕ್ಷರಿ, ಗಟ್ಟಿಯಾಗಿ ಓದುವುದು, ನಿಸರ್ಗ ವೀಕ್ಷಣೆ, ಮೋಜಿನ ಗಣಿತ, ಕಸದಿಂದ ರಸ, ಚಿತ್ರಕಲೆ, ಹಾಡು, ನೃತ್ಯ, ಪರಿಸರ, ಸಾಮಾಜಿಕ ಕಾಳಜಿ ಮತ್ತಿತರ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ವಿಶೇಷ ಪ್ರಯತ್ನವಾಗಿದೆ’ ಎಂದರು.

ಮುಖ್ಯಶಿಕ್ಷಕಿ ಮಮತಾ ಮಾತನಾಡಿ, ‘5ರಿಂದ 8ನೇ ತರಗತಿ ಮಕ್ಕಳಿಗೆ ಶಿಬಿರ ನಡೆಯಲಿದೆ. ’ ಎಂದರು.

ಗ್ರಂಥಾಲಯ ಮೇಲ್ವಿಚಾರಕ ಲೋಕೇಶ್, ಸ್ವಯಂ ಸೇವಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-40-1387557451

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.