ಶನಿವಾರಸಂತೆ: ‘ಶಾಸ್ತ್ರೀಯ ನೃತ್ಯ ಕಲೆ ಜೀವನದ ಅವಿಭಾಜ್ಯ ಅಂಗವಾಗಿದೆ’ ಎಂದು ಲೇಖಕಿ ಶ.ಗ.ನಯನತಾರಾ ಪ್ರಕಾಶ್ ಚಂದ್ರ ಹೇಳಿದರು.

ಇಲ್ಲಿನ ಚಿನ್ನಳ್ಳಿ ರಸ್ತೆಯಲ್ಲಿ ‘ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್’ ವತಿಯಿಂದ ನೂತನ ನಾಟ್ಯ ಮಿಲನ ನೃತ್ಯ ಶಾಲೆಯ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೃತ್ಯ ಸಂಗೀತ ಶಿಕ್ಷಣದ ಒಂದು ಭಾಗವಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ಶಾಸ್ತ್ರೀಯ ನೃತ್ಯ, ಸಂಗೀತದಲ್ಲಿ ಆಸಕ್ತಿ ಮೂಡಿಸಬೇಕು. ಈ ಮೂಲಕವಾಗಿ ನೃತ್ಯ ಕಲೆಯನ್ನು ಪೋಷಿಸಬೇಕು’ ಎಂದು ಸಲಹೆ ನೀಡಿದರು.

ನಾಟ್ಯ ಮಿಲನ ನೃತ್ಯ ಶಾಲೆಯ ಕುರಿತು ಭರತ ನಾಟ್ಯ ಕಲಾವಿದೆ ಮಿಲನ ಭರತ್ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಭರತನಾಟ್ಯ ಕಲಾವಿದೆಯಾಗಿರುವ ನಾನು ಮಕ್ಕಳಿಗೂ ನೃತ್ಯ ಕಲೆಯನ್ನು ಕಲಿಸಿಕೊಡಬೇಕು ಎಂಬ ಉದ್ದೇಶದಿಂದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೆ ಪೋಷಕರ ಸಹಕಾರದಿಂದ ನಾಟ್ಯ ಮಿಲನ ನೃತ್ಯ ಶಾಲೆಯನ್ನು ಪ್ರಾರಂಭಿಸಲಾಯಿತು. ನಂತರ, ವಿದ್ಯಾಭ್ಯಾಸ ಮುಗಿದು ಸರ್ಕಾರಿ ಅಧಿಕಾರಿಯಾದ ನಂತರ ನೃತ್ಯ ಶಾಲೆಯನ್ನು ಚಾರಿಟಬಲ್ ಟ್ರಸ್ಟ್ ಆಗಿ ಪರಿವರ್ತಿಸಿ ಶಾಖೆಯನ್ನು ವಿಸ್ತರಿಸಿ ಈ ಮೂಲಕ ಇಲ್ಲಿಯವರೆಗೆ ಗ್ರಾಮೀಣ ಮತ್ತು ಸರ್ಕಾರಿ ಶಾಲೆಯ ಸುಮಾರು 6 ಸಾವಿರ ಮಕ್ಕಳಿಗೆ ಉಚಿತ ನೃತ್ಯ ತರಬೇತಿಯನ್ನು ನೀಡಿದ್ದೇವೆ’ ಎಂದರು.

ಚಾರಿಟಬಲ್ ಟ್ರಸ್ಟ್ನ ಸ್ಥಾಪಕ ಟ್ರಸ್ಟಿ ಕುದುಕುಳಿ ಭರತ್ ಮಾತನಾಡಿ, ‘ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಕಲೆಗಳನ್ನು ಪ್ರೋತ್ಸಾಹಿಸಬೇಕು. ಅದೇ ರೀತಿಯಲ್ಲಿ ಕೊಡಗಿನಲ್ಲಿ ತನ್ನದೆ ಆದ ಕಲೆ ಸಂಸ್ಕೃತಿ ಆಚಾರ ವಿಚಾರಗಳಿದ್ದು, ಇವುಗಳನ್ನು ಉಳಿಸಿ ಬೆಳೆಸುವ ಅಗತ್ಯ ಇದೆ’ ಎಂದರು.

ಈ ವೇಳೆ ದೈಹಿಕ ಶಿಕ್ಷಣ ಶಿಕ್ಷಕಿ ಕವಿತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿತೇಂದ್ರ, ಶಿಕ್ಷಕಿ ತೇಜಾವತಿ, ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-719079413

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.