ಸೋಮವಾರಪೇಟೆ: ಸಿಎಂಸಿಎ ಸಂಸ್ಥೆ ಬೆಂಗಳೂರು ಮತ್ತು ನಾವು ಪ್ರತಿಷ್ಠಾನ ಕೊಡಗು ಮತ್ತು ಐಡಿಬಿಐ ಬ್ಯಾಂಕ್ ಸಿಎಸ್ಆರ್ ಸಹಾಯದೊಂದಿಗೆ ಸಿವಿಕ್ ಕ್ಲಬ್ ಹಾಗೂ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮದಡಿ ಜಿಲ್ಲೆಯ ಮೂರು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಮತ್ತು ಪರಿಕರಗಳನ್ನು ಬುಧವಾರ ವಿತರಿಸಲಾಯಿತು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ತಾಲ್ಲೂಕಿನ ಆಲೂರು ಸಿದ್ಧಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ತಿತಿಮತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಇಂಟರಾಕ್ಟೀವ್ ಸ್ಮಾರ್ಟ್ ಬೋರ್ಡ್, ಲಘು ಯುಪಿಎಸ್ ಹಾಗೂ ಒಂದು ವರ್ಷದ ಇಂಟರ್ ನೆಟ್ ರೀಚಾರ್ಜ್ ಸಹಿತ ವೈ-ಫೈ ರೂಟರ್ಗಳನ್ನು ವಿತರಿಸಿದರು.

ಆಲೂರು ಸಿದ್ದಾಪುರ ಶಾಲೆಯಲ್ಲಿ ಪರಿಕರ ವಿತರಿಸಿದ ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯ ಬಲಪಡಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಡಿಜಿಟಲ್ ಉಪಕರಣಗಳ ಮೂಲಕ ಶಾಲೆಗಳ ಮಕ್ಕಳು ಹೊಸ ಕೌಶಲ ಕಲಿತು ಉತ್ತಮ ಪ್ರಜೆಗಳಾಗಿ, ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಿಎಂಸಿಎ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸುಮನ್ ಮ್ಯಾಥ್ಯೂ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಮಾನತೆ, ಲಿಂಗ ಸಮಾನತೆ, ಅನುಭೂತಿ ಹಾಗೂ ನಾಗರಿಕ ಮೌಲ್ಯಗಳನ್ನು ಬೆಳೆಸಲು ನಮ್ಮ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಜೊತೆಗೆ 21ನೇ ಶತಮಾನದ ಕೌಶಲ್ಯಗಳಾದ ಜೀವನ ಕೌಶಲಗಳು, ನಾಯಕತ್ವ, ಭಾವನಾತ್ಮಕ ಬುದ್ಧಿಮತ್ತೆ ಮತ್ತು ನಾಗರಿಕ ಭಾಗವಹಿಸುವಿಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಶಿಕ್ಷಕಿಯರಾದ ಪೂರ್ಣಿಮ, ಲೋಲಾಕ್ಷಿ, ನಂದಿನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-51-567127498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.