ಪ್ರಜಾವಣಿ ವಾರ್ತೆ

ಸುಂಟಿಕೊಪ್ಪ: ಕನ್ನಡದ ಭಾಷೆ ಸಾಹಿತ್ಯದ ಬೆಳವಣಿಗೆಯಲ್ಲಿ ಕನ್ನಡಿಗರು ಕನ್ನಡೇತರರನ್ನು ತೊಡಗಿಸಿಕೊಂಡಾಗ ಕನ್ನಡ ಬೆಳೆಯಲು ಸಾಧ್ಯ ಎಂದು ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ನ ಗೌರವ ಸಲಹೆಗಾರ ಚಿದ್ವಿಲಾಸ್ ಹೇಳಿದರು.

ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಕವಿ ಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯುವ ಜನತೆಯಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.

‘ಸಾಹಿತ್ಯ ಕ್ಷೇತ್ರದತ್ತ ಯುವ ಪೀಳಿಗೆಯನ್ನು ಆಕರ್ಷಿಸಲು ದಾರಿ' ಎಂಬ ವಿಷಯದ ಕುರಿತು ಮಾತನಾಡಿದ ಲೇಖಕರು ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಕೆ.ಬಾಲಚಂದ್ರ, ‘ಸಾಹಿತ್ಯದ ನೀತಿ, ಸಾಹಿತ್ಯ ನಿರ್ಮಾಣ ಮತ್ತು ಸಾಹಿತ್ಯವನ್ನು ಇಂದಿನ ಪೀಳಿಗೆಗೆ ತಲುಪಿಸುವ ಕೆಲಸದಲ್ಲಿ ನಾವು ಸೋತಿದ್ದೇವೆ. ಹಳೆಯ ಅಥವಾ ಹೊಸ ಸಾಹಿತ್ಯ ಮತ್ತು ಸಾಹಿತಿ ಬದಲಾಗಿಲ್ಲ. ಕತೆ ನಾಟಕಗಳಾಗಿ, ಕವಿತೆ ಸಂಗೀತವಾಗಿ ಮಕ್ಕಳ ಮನಸ್ಸನ್ನು ತಟ್ಟಬೇಕು. ನಮ್ಮ ನಡುವಿನ ಸಾಹಿತಿಗಳು, ಕವಿಗಳು ಸಾಮಾಜಿಕ ಜಾಲತಾಣ, ಡಿಜೀಟಲಿಕರಣದ ವಿವಿಧ ಮಾಧ್ಯಮಗಳ ಮೂಲಕ ಮಕ್ಕಳನ್ನು ತಲುಪಬೇಕು’ ಎಂದು ಕರೆ ನೀಡಿದರು.

'ಕೊಡಗು ಕ್ರೀಡೆಯ ತವರೂರು ಆಗಬೇಕಾದ ಅನುಕೂಲಗಳು' ವಿಷಯದ ಮೇಲೆ ಮಾತನಾಡಿದ ಕ್ರೀಡಾ ಬರಹಗಾರ ಚೆಪ್ಪುಡೀರ ಕಾರ್ಯಪ್ಪ, ‘ಕ್ರೀಡೆ ಈ ಜಿಲ್ಲೆಯ ಜನರ ರಕ್ತದಲ್ಲಿದೆ. ಕ್ರೀಡೆಗೆ ಜಾತಿ ಇಲ್ಲ. ಕೊಡಗಿನ ಕ್ರೀಡಾ ಶಾಲೆಗಳಲ್ಲಿ, ವಸತಿ ಗೃಹಗಳಲ್ಲಿ ಕ್ರೀಡಾ ಪಟುಗಳಿಗೆ ಹೆಚ್ಚಿನ ಅವಕಾಶವಾಗಬೇಕು. ಕೊಡಗನ್ನು ಕ್ರೀಡಾ ಜಿಲ್ಲೆಯೆಂದು ಘೋಷಿಸಬೇಕು’ ಎಂದು ಆಗ್ರಹಿಸಿದರು.

'ಕನ್ನಡ ಕಥಾ ಜಗತ್ತು ಮತ್ತು ಕೊಡಗು' ಎಂಬ ವಿಷಯದ ಬಗ್ಗೆ ನಿವೃತ್ತ ಪ್ರಾಂಶುಪಾಲ ಜೆ.ಸೋಮಣ್ಣ ವಿಷಯ ಮಂಡಿಸಿದರು. ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮ.ಕೋಡಿರ ಲೋಕೇಶ್ ಮೊಣ್ಣಪ್ಪ ಮಾತನಾಡಿ, ಮನೆಯ ಒಂದು ಕೋಣೆಯಲ್ಲಿ ಪುಟ್ಟ ಗ್ರಂಥಾಲಯ ನಿರ್ಮಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು, ಸೋಮವಾರಪೇಟೆ ತಾಲ್ಲೂಕು ಬಿಇಒ ಕೃಷ್ಣಪ್ಪ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಅಬ್ದುಲ್ ರಶೀದ್ ಇದ್ದರು. ಟಿ.ಎಸ್.ಸುಮಾ ಸ್ವಾಗತಿಸಿದರು. ಶ್ವೇತ ರವೀಂದ್ರ ನಿರೂಪಿಸಿದರು. ಎ.ವಿ.ಮಂಜುನಾಥ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-693976661

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.