ಮಡಿಕೇರಿ: ಇಡೀ ವಿಶ್ವಾದ್ಯಂತ ಇರುವ ರೆಡ್ಕ್ರಾಸ್ ಕೊಡಗಿನಲ್ಲೂ ಇದೆ. ಮಾತ್ರವಲ್ಲ, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯುತ್ತಮ ಎಂಬ ಕೀರ್ತಿಗೂ ಭಾಜನವಾಗಿದೆ.

ಇದು ಕೊಡಗಿನಲ್ಲಿ 1952ರಲ್ಲೇ ಆರಂಭವಾಗಿದ್ದು, 2023–24ನೇ ಸಾಲಿನಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಸೇವಾ ಸಾಧನೆ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಕೊಡಗು ರೆಡ್ಕ್ರಾಸ್ನ ಹೆಗ್ಗಳಿಕೆ.

ಈ ವರ್ಷ ಮಹಿಳೆಯರಿಗೆ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಆದ್ಯತೆ ವಿಷಯವನ್ನಾಗಿ ತೆಗೆದುಕೊಂಡು ತಜ್ಞರಿಂದ ಉಪನ್ಯಾಸ, ಕ್ಯಾನ್ಸರ್ ತಪಾಸಣಾ ಶಿಬಿರಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸಿದೆ. ಈ ಮೂಲಕ ಕ್ಯಾನ್ಸರ್ ಅನ್ನು ಬೇಗನೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಕೊಡಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಕ್ಯಾನ್ಸರ್ನಿಂದ ಹೆಚ್ಚುತ್ತಿರುವ ಮಹಿಳೆಯರ ಸಾವಿಗೆ ಕಡಿವಾಣ ಹಾಕಬಹುದು ಎಂಬುದು ಸಂಸ್ಥೆಯ ಉದ್ದೇಶವಾಗಿದೆ.

ಇದಲ್ಲದೇ, ಈ ವರ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಕೃತಕ ಅಂಗಾಂಗಳ ವಿತರಣೆ, ಶ್ರವಣ ಸಾಧನೆಗಳ ವಿತರಣೆ, ಗಾಲಿ ಕುರ್ಚಿ ವಿತರಣೆ ಸೇರಿದಂತೆ 50ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಕೊಡಗು ರೆಡ್ಕ್ರಾಸ್ ಮಾಡಿದೆ.

ಎಲ್ಲಕ್ಕಿಂತ ಮಿಗಿಲಾಗಿ, ರಕ್ತದಾನ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬಂದು ರಕ್ತದ ಕೊರತೆ ನೀಗಿಸುವ ಪ್ರಯತ್ನವನ್ನೂ ಮುಂದುವರಿಸಿದೆ. ಈಗಾಗಲೇ ಇರುವ ರೆಡ್ಕ್ರಾಸ್ ಭವನದ ಮೇಲೆ ಸಭಾಂಗಣವೊಂದನ್ನು ನಿರ್ಮಿಸುವುದಕ್ಕೆ ಪ್ರಯತ್ನಗಳೂ ನಡೆದಿವೆ.

ಹಲವು ಕಾಲೇಜುಗಳಲ್ಲಿ ಯೂತ್ ರೆಡ್ಕ್ರಾಸ್ ಘಟಕಗಳನ್ನು ತೆರೆಯಲಾಗಿದ್ದು, ಆ ಮೂಲಕ ವಿದ್ಯಾರ್ಥಿಗಳಿಗೆ ರಕ್ತದಾನ ಮಹತ್ವದ ಕುರಿತು, ಪ್ರಥಮ ಚಿಕಿತ್ಸೆ ಕುರಿತು ಅರಿವು ಮೂಡಿಸುವ ಕೆಲಸಗಳು ನಡೆಯುತ್ತಿವೆ.

ಕೊಡಗು ರೆಡ್ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಕೋವಿಡ್ ಸಂದರ್ಭದಲ್ಲಿ ₹ 30 ಲಕ್ಷದ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಪ್ರತಿ ವರ್ಷವೂ ಕನಿಷ್ಠ ಎಂದರೂ 12ಕ್ಕೂ ಹೆಚ್ಚು ರಕ್ತದಾನ ಶಿಬಿರಗಳು ನಡೆಯುತ್ತಿವೆ. ಈ ವರ್ಷ ಮಹಿಳೆಯರಿಗೆ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಮುಂದೆ ಇನ್ನಷ್ಟು ಸೇವಾಪರ ಕಾರ್ಯಗಳನ್ನು ನಡೆಸಲಾಗುವುದು’ ಎಂದು ಹೇಳಿದರು.

ಕಳೆದ 3 ವರ್ಷದ ಹಿಂದೆ ಕೊಡಗು ಜಿಲ್ಲಾ ರೆಡ್ಕ್ರಾಸ್ನ ಸ್ವಂತ ಭವನ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಸುಮಾರು 450 ಮಂದಿ ಸದಸ್ಯರಿದ್ದಾರೆ.

ಕೊಡಗು ಜಿಲ್ಲಾ ರೆಡ್ಕ್ರಾಸ್ನ 2022–25ರ ಅವಧಿಯ ಆಡಳಿತ ಮಂಡಳಿಗೆ ಕೊಡಗು ಜಿಲ್ಲಾಧಿಕಾರಿ ಎಸ್.ಟಿ.ಸೋಮಶೇಖರ್ ಅಧ್ಯಕ್ಷರಾಗಿ, ಸಭಾಪತಿಯಾಗಿ ಬಿ.ಕೆ.ರವೀಂದ್ರ ರೈ, ಉಪಸಭಾಪತಿ ಎಚ್.ಟಿ.ಅನಿಲ್, ಕಾರ್ಯದರ್ಶಿ ಧನಂಜಯ, ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕರಾಗಿ ಶಾಂ ಜೋಸೆಫ್, ಸತೀಶ್ ರೈ, ಡಾ.ಪ್ರಶಾಂತ್, ವಿಜಯ್ ಶೆಟ್ಟಿ, ವಸಂತ್ಕುಮಾರ್, ಶರತ್ ಶೆಟ್ಟಿ, ಎನ್.ಪ್ರಕಾಶ್, ರಾಜೇಶ್, ದಯಾನಂದ್, ಎ.ಕೆ.ಜೀವನ್, ಕೆ.ಮಧುಕರ್, ವೆಂಕಟೇಶ್, ಸತೀಶ್, ವಸಂತ ತೆನ್ನಿರಾ ಮೈನಾ ಇದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-106030577

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.