ಮಡಿಕೇರಿ: ಬಂದೂಕಿನಿಂದ ಹಾರಿದ ಗುಂಡು ಯಾವ ರೀತಿ ತನ್ನ ಗುರಿಯನ್ನು ತಲುಪುತ್ತದೆಯೋ ಅದೇ ರೀತಿಯಲ್ಲಿ ಎನ್ಸಿಸಿ ವಿದ್ಯಾರ್ಥಿಗಳು ತಮ್ಮ ಬದುಕಿನ ಗುರಿಯನ್ನೂ ತಲುಪಬೇಕು ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಅಶೋಕ ಸಂಗಪ್ಪ ಆಲೂರ ಹೇಳಿದರು.

ಇಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಎನ್ಸಿಸಿ ಕೆಡೆಟ್ಗಳಿಗಾಗಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ₹ 5.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ‘ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್’ ಅನ್ನು 19ನೇ ಕರ್ನಾಟಕ ಬೆಟಾಲಿಯನ್ ಎನ್ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ರೆಜಿತ್ ಮುಕುಂದನ್ ಅವರೊಂದಿಗೆ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಎನ್ಸಿಸಿ ಕೆಡೆಟ್ಗಳಾಗಿ ಶಿಸ್ತು ಮತ್ತು ದೇಶ ಭಕ್ತಿಯನ್ನೂ ಮೈಗೂಡಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಎನ್ಸಿಸಿ ಸೇರ್ಪಡೆಯಾಗಬೇಕು. ದೇಶದ ರಕ್ಷಣೆಗೆ ಅಗತ್ಯವಾದಾಗ ದೇಶ ಸೇವೆಗೂ ಮುಂದಾಗಬೇಕು ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಕಾಲೇಜಿಗೆ ಹತ್ತಾರು ಕೊಡುಗೆಗಳನ್ನು ನೀಡಿದೆ’ ಎಂದು ಶ್ಲಾಘಿಸಿದರು.

19ನೇ ಕರ್ನಾಟಕ ಬೆಟಾಲಿಯನ್ ಎನ್ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ರೆಜಿತ್ ಮುಕುಂದನ್ ಮಾತನಾಡಿ, ‘ಮಡಿಕೇರಿಯ ಮುತ್ತಮುತ್ತಲಿನ ಪ್ರದೇಶದಲ್ಲಿ ಎನ್ಸಿಸಿ ಕೆಡೆಟ್ಗಳಿಗೆ ಫೈರಿಂಗ್ ರೇಂಜ್ ಇಲ್ಲದಾಗಿತ್ತು. 19ನೇ ಕರ್ನಾಟಕ ಎನ್ಸಿಸಿ ಬೆಟಾಲಿಯನ್ಗೆ ಈ ರೈಫಲ್ ಫೈರಿಂಗ್ ರೇಂಜ್ ಅಮೂಲ್ಯವಾಗಿದ್ದು, ಕೆಡೆಟ್ಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಫೈರಿಂಗ್ ರೇಂಜ್ನ ಅಗತ್ಯತೆಯನ್ನು ಮನಗಂಡು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಕಾಲೇಜು ಮೈದಾನದ ಪಕ್ಕದಲ್ಲೇ ಎನ್ಸಿಸಿಗೆ ಕೊಡುಗೆಯಾಗಿ ನೀಡಿರುವುದಕ್ಕೆ ಕರ್ನಲ್ ರೆಜಿತ್ ಮುಕುಂದನ್ ಶ್ಲಾಘಿಸಿದರು.

ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮುಕ್ಕಾಟಿರ ಎ.ಅಪ್ಪಯ್ಯ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿಯೇ ಭವಿಷ್ಯದ ಬಗ್ಗೆ ನಿಖರ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಜಿಲ್ಲೆಯಲ್ಲಿದ್ದ ಫೈರಿಂಗ್ ರೇಂಜ್ಗಳು ಪ್ರಸ್ತುತ ಒತ್ತುವರಿಗೆ ತುತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ವಕೀಲರಾದ ಮುಂಡಂಡ ಸುದೈಯ್ ನಾಣಯ್ಯ ಮಾತನಾಡಿ, ಈ ಫೈರಿಂಗ್ ರೇಂಜ್ನಲ್ಲಿ ರಾಜ್ಯ, ರಾಷ್ಟ್ರಮಟ್ಟದ ಶೂಟಿಂಗ್ ಕ್ರೀಡೆಗಳಿಗೆ ತರಬೇತಿಯನ್ನು ನೀಡುವ ಕುರಿತು ಚಿಂತಿಸೇಕು ಎಂದರು.

ಹಳೇ ವಿದ್ಯಾರ್ಥಿ ಸಂಘದ ಮುಖಂಡರಾದ ಬೊಟ್ಟಂಗಡ ಗಣಪತಿ, ಶ್ಯಾಮ್, ಚಂದನ್ ನಂದರಬೆಟ್ಟು, ರಶ್ಮಿ ಮೇದಪ್ಪ, ದಮಯಂತಿ, ಕಾಲೇಜಿನ ಉಪನ್ಯಾಸಕರಾದ ರವಿಶಂಕರ್, ಕೃಷ್ಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-1421603790

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.