ವಿರಾಜಪೇಟೆ: ‘ಕೊಡಗು ಎರಡು ರಾಜ್ಯಗಳನ್ನು ಬೆಸೆಯುವ ಮತ್ತು ಭಾಷೆಗಳ ಸಂಗಮ ಭೂಮಿಯಾಗಿದೆ. ಇಂತಹ ಜಾಗದಲ್ಲಿ ಸಹಬಾಳ್ವೆಯನ್ನು ಅರ್ಥಪೂರ್ಣವಾಗಿ ಕಟ್ಟಿ ಕೊಡುವ ಸಾಮರ್ಥ್ಯ ಕನ್ನಡಕ್ಕಿದೆ’ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಅವರು ಹೇಳಿದರು.

ಪಟ್ಟಣದ ಕಾವೇರಿ ಕಾಲೇಜು ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ನುಡಿ ಉತ್ಸವ ಮತ್ತು ಕೊಡಗು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕಾಲೇಜಿನಲ್ಲಿ ಮಂಗಳವಾರ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕನ್ನಡ ಭಾಷೆ ಸಾಕಷ್ಟು ವರ್ಷಗಳ ಇತಿಹಾಸವಿರುವ ಭಾಷೆ. ಈ ಭಾಷೆಯಲ್ಲಿ ಸಾಹಿತ್ಯ ಪರಂಪರೆ ಸಂಸ್ಕೃತಿ ಆಚಾರ, ವಿಚಾರ ಅಳವಾಗಿದ್ದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ಆಗಬೇಕು. ನಮ್ಮ ಸಾಹಿತ್ಯ ಪರಂಪರೆ ಸಂಸ್ಕೃತಿ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡುಹೋಗಬೇಕು. ನುಡಿ ಎನ್ನುವುದು ಸಂಸ್ಕೃತಿ ಪರಂಪರೆ ಮೌಲ್ಯಗಳನ್ನು ತಾರಕಕ್ಕೆ ಕೊಂಡ್ಯೊಯುತ್ತದೆ’ ಎಂದರು.

‘ಕನ್ನಡ ಭಾಷೆಯನ್ನು ಬಲಪಡಿಸುವುದೆಂದರೆ ಅದು ಬೇರೆ ಭಾಷೆಯನ್ನು ವಿರೋಧಿಸುವುದಲ್ಲ. ಗಡಿಯಲ್ಲಿ ವಿಭಿನ್ನ ಭಾಷೆಯ ಮಕ್ಕಳಿರುತ್ತಾರೆ. ಕಲಿಕೆಗೆ ಯಾವ ಭಾಷೆ ಎನ್ನುವ ಗೊಂದಲ ಇರುತ್ತದೆ. ಅಗತ್ಯ ಭಾಷೆ ಕಲಿಕೆಗೆ ನಾವು ಅವಕಾಶ ಮಾಡಿಕೊಡಬೇಕು’ ಎಂದರು.

ದಲಿತ ಸಾಹಿತ್ಯ ಪರಿಷತ್ತಿನ ನುಡಿ ಉತ್ಸವ ಸಮಿತಿ ಅಧ್ಯಕ್ಷ ಅರ್ಜುನ್ ಮೌರ್ಯ ಅವರು ಮಾತನಾಡಿ, ‘ಕಳೆದ ನವೆಂಬರ್ನಿಂದ ಈ ಸಾಲಿನ ನವಂಬರ್ವರೆಗೆ 19 ಕಾರ್ಯಕ್ರಮ ನಡೆಸುವ ಉದ್ದೇಶವಿದೆ. ಗಡಿನಾಡಿನಲ್ಲಿ ಕನ್ನಡ ಉಪನ್ಯಾಸಕರು ಅನ್ಯಭಾಷಿಕರಿಗೆ ಮಾಡುವ ಬೋಧನೆಯಲ್ಲಿ ಬದಲಾವಣೆ ಅಗತ್ಯ ಏಕೆ ಎಂಬುದನ್ನು ಚರ್ಚಿಸಲು ಈ ಸಂಕಿರಣ ಆಯೋಜಿಸಲಾಗಿದೆ’ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾವೇರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಪಿ.ಬೋಪಣ್ಣ ಅವರು ಮಾತನಾಡಿದರು. ವೇದಿಕೆಯಲ್ಲಿ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಕೆ.ಜಿ ವೀಣಾ ಉಪಸ್ಥಿತರಿದ್ದರು. ಕಾವೇರಿ ಕಾಲೇಜಿನ ಕನ್ನಡ ಉಪನ್ಯಾಸಕರು ಬಿ.ಬಿ ಸುನಿಲ್ ಕುಮಾರ್, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಪವಿತ್ರ, ಕನ್ನಡ ಉಪನ್ಯಾಸಕ ಅಕ್ರಮ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-51-626283761

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.