ಮಡಿಕೇರಿ: ಕೊಡವ ಭಾಷೆಯಲ್ಲಿ ಓದುವ, ಬರೆಯುವ ಪ್ರವೃತ್ತಿಯನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಕಲಿಸಬೇಕಾದ ಅನಿವಾರ್ಯತೆ ಇದೆ. ಇದು ಭಾಷೆಯ ಭವಿಷ್ಯವನ್ನು ನಿರ್ಣಯಿಸುತ್ತದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಪ್ರತಿಪಾದಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ 7ನೇ ಕೊಡವ ಪುಸ್ತಕ ಪತ್ತಾಯ (ಭಂಡಾರ)ವನ್ನು ಸುಂಟಿಕೊಪ್ಪನಾಡು ಕೊಡವ ಸಮಾಜದಲ್ಲಿ ಸ್ಥಾಪಿಸಿದ ನಂತರ ಅವರು ಮಾತನಾಡಿದರು.

ಯಾವುದೇ ಭಾಷೆಯಾದರೂ ಸರಿ, ಸಾಹಿತ್ಯ ರಚನೆಯಾದಷ್ಟು ಭಾಷೆಯು ಗಟ್ಟಿಗೊಳ್ಳುವುದು. ಕೊಡವ ಭಾಷೆಯು ಸಾಹಿತಿಕವಾಗಿ ಮತ್ತಷ್ಟು ಬೆಳೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ನಡಿಕೇರಿಯಂಡ ಚಿಣ್ಣಪ್ಪ ಅವರು 1924ರ ಅವಧಿಯಲ್ಲಿ ಕೊಡವ ಜಾನಪದ ಗ್ರಂಥ ‘ಪಟ್ಟೋಲೆ ಪಳಮೆ’ಯನ್ನು ಹೊರತಂದಿರುವುದು ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಭದ್ರ ಬುನಾದಿಯಂತಿದೆ ಎಂದರು.

ಹರದಾಸ ಅಪ್ಪಚ್ಚಕವಿ, ಬಾಚಮಡ ಡಿ.ಗಣಪತಿ, ಐಮಾ ಮುತ್ತಣ್ಣರು ಸಮಕಾಲೀನರಾಗಿ ಇದ್ದುಕೊಂಡು ಹೊರತಂದಂತಹ ಹಲವು ಕೃತಿಗಳು ಕೊಡವ ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆಯಂತಿದೆ. ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ದಾರಿ ಮಾಡಿಕೊಟ್ಟಂತಾಗುವುದು ಎಂದರು.

ಕೊಡವ ಅಕಾಡೆಮಿಯು ಈಗಾಗಲೇ ಹಲವು ವಿಧದ ಪುಸ್ತಕಗಳನ್ನು ಬಿಡುಗಡೆಗೊಳಿಸಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ವಿಷಯಾಧಾರಿತ ಪುಸ್ತಕಗಳನ್ನು ಹೊರತರಬೇಕಿದೆ. ಕೊಡವ ಜನಾಂಗವು ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಜನಾಂಗವಾಗಿದ್ದರೂ ಸ್ವಾಭಿಮಾನದಿಂದ ಬದುಕುತ್ತಿರುವುದು ಹೆಗ್ಗಳಿಕೆಯ ವಿಷಯವಾಗಿದೆ ಎಂದು ಹೇಳಿದರು.

ಹಿರಿಯ ಸಮಾಜ ಸೇವಕ ಪುಡಿಯಂಡ ಮುತ್ತಣ್ಣ ಅವರು ಸುಂಟಿಕೊಪ್ಪ ಕೊಡವ ಸಮಾಜಕ್ಕೆ ದಾನವಾಗಿ ಸಿಕ್ಕ ಜಾಗದ ಬಗ್ಗೆ ಹಾಗೂ ಸಮಾಜ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು.

ಕುಶಾಲನಗರ ಶ್ರೀ ಇಗ್ಗುತಪ್ಪ ಕೊಡವ ಕಲ್ಚರಲ್ ಅಸೋಸಿಯೇಷನ್ ಉಪಾಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ‘ಕೊಡವ ಪುದಿಯ ಕಾಲ ಎಡಮ್ಯಾರ್ ಒಂದ್’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.

ಈ ವೇಳೆ ಅಕಾಡೆಮಿಯ ವತಿಯಿಂದ ಸುಂಟಿಕೊಪ್ಪ ಕೊಡವ ಸಮಾಜಕ್ಕೆ ಕೊಡವ ಪುಸ್ತಕ ಪತ್ತಾಯದ ನೋಂದಣಿ ಪತ್ರ ಹಾಗೂ ನಾಲ್ಕು ದುಡಿಗಳನ್ನು ಹಸ್ತಾಂತರಿಸಲಾಯಿತು.

ಸುಂಟಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಚೇಂದ್ರಿಮಡ ಕರುಂಬಯ್ಯ, ಸುಂಟಿಕೊಪ್ಪ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬೊಳಂದಂಡ ಸರೋಜಿನಿ ದೇವಯ್ಯ, ಸಮಾಜ ಕಾರ್ಯದರ್ಶಿ ಅಜ್ಜಿಕುಟ್ಟಿರ ಸಿ.ಗಿರೀಶ್ ಹಾಗೂ ಅಕಾಡೆಮಿಯ ಸದಸ್ಯೆ ಕಂಬೆಯಂಡ ಡೀನಾ ಬೋಜಣ್ಣ, ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟಿರ ಸಿ.ಗಿರೀಶ್, ಅಜ್ಜಿಕುಟ್ಟಿರ ಸುನೀತ ಗಿರೀಶ್, ನಾಪಂಡ ಡಾಟಿ ಈರಪ್ಪ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-51-1788199351

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.