ಕೋಲಾರ: ಬಸವಣ್ಣ ಅವರ ಆಶಯದಂತೆ ಸಮ ಸಮಾಜ ನಿರ್ಮಾಣದ ಪ್ರಯತ್ನವಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ‘ಅನುಭವ ಮಂಟಪ ವೇದಿಕೆ’ ರಚಿಸಿರುವುದು ಶ್ಲಾಘನೀಯ ಕಾರ್ಯ ಎಂದು ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಬಣ್ಣಿಸಿದರು.

ತಾಲ್ಲೂಕಿನ ಮಂಗಸಂದ್ರದ ಸುವರ್ಣಗಂಗೆ ಕ್ಯಾಂಪಸ್ನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಅನುಭವ ಮಂಟಪ ವೇದಿಕೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಅನುಭವ ಮಂಟಪ ವೇದಿಕೆ ಮೂಲಕ ಬಸವ ತತ್ವಗಳ ಚರ್ಚೆ ನಡೆಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣ ಅವರ ಸ್ಮರಣೆ ಜತೆಗೆ ಜಾತಿ, ಧರ್ಮ, ಕುಲ, ಮತ ಬೇಧವಿಲ್ಲದ ಮನಸ್ಥಿತಿ ನಿರ್ಮಾಣವಾಗಬೇಕು ಎಂದರು.

ಬಸವಣ್ಣ ಹೇಳಿದಂತೆ ನಾವು ದೇವರನ್ನು ದೇವಾಲಯ, ಚರ್ಚ್, ಮಸೀದಿಗಳಲ್ಲಿ ಹುಡುಕುವ ಅಗತ್ಯವಿಲ್ಲ. ನಮ್ಮನ್ನು ನಾವೇ ಅರಿತರೆ ಅದೇ ದೈವತ್ವ ಎಂದು ಅಭಿಪ್ರಾಯಪಟ್ಟರು.

ದಮನಿತರ ಧ್ವನಿಯಾಗಿದ್ದ ಬಸವಣ್ಣನವರ ಅನುಭವ ಮಂಟಪದಂತಿರುವ ಈ ವೇದಿಕೆ ದೇಶದ ಗಮನ ಸೆಳೆಯಬೇಕು. ಅಸ್ಪೃಶ್ಯತೆಗೆ ತಿಲಾಂಜಲಿ ಇಡಬೇಕು, ಸ್ತ್ರೀ ಸಮಾನತೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಕೆ.ರವಿ, ‘ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾದರು. ಜನಸಾಮಾನ್ಯರಿಗೆ ವಚನಗಳ ಮೂಲಕ ಸಂದೇಶ ತಲುಪಿಸಿದರು. ಸಾಮಾಜಿಕ, ಆರ್ಥಿಕ, ರಾಜಕೀಯ ಬದಲಾವಣೆಗೆ ಅಡಿಪಾಯ ಹಾಕಿಕೊಟ್ಟರು’ ಎಂದರು.

ಅನುಭವ ಮಂಟಪ ವೇದಿಕೆ ಬಳಸಿಕೊಂಡು ಚರ್ಚೆಗಳ ಮೂಲಕ ಬಸವ ತತ್ವಗಳ ಮಹತ್ವ ಅರಿತು ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. ದ್ವೇಷ, ಅಸೂಯೆ ಕೊನೆಗೊಳ್ಳಬೇಕು ಎಂದು ನುಡಿದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಲೋಕನಾಥ್, ಹಣಕಾಸು ಅಧಿಕಾರಿ ವಸಂತಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ ಮಾತನಾಡಿದರು.

ಪ್ರೊ.ವಿಶ್ವನಾಥ್ ಕವನ ವಾಚಿಸಿದರು. ಗಣಿತ ಉಪನ್ಯಾಸಕಿ ಸಿ.ಎಸ್.ಶ್ರೀಲತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ನಂದಶ್ರೀ ಸ್ವಾಗತಿಸಿ, ಗಾಯತ್ರಿದೇವಿ ಅತಿಥಿಗಳ ಪರಿಚಯ ಮಾಡಿಕೊಟ್ಟರು.

ಆಡಳಿತ ಕುಲಸಚಿವ ಸಿ.ಎನ್.ಶ್ರೀಧರ್, ಸುವರ್ಣಗಂಗೆ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಕುಮುದಾ, ಪಿ.ಎಂ.ಉಷಾ ನೋಡಲ್ ಅಧಿಕಾರಿ ರಮೇಶ್, ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-18-1438965100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.