ಕೋಲಾರ: ನಗರದ ಖಾದ್ರಿಪುರದಲ್ಲಿರುವ ನಲ್ಲೂರಮ್ಮ ದೇವಿ ಮಕ್ಕಳ ಆಶ್ರಮ ಕ್ಷೇಮಾಭಿವೃದ್ಧಿ ಟ್ರಸ್ಟ್ನಲ್ಲಿ ಗುರುವಾರ ಭಾರತ ಸೇವಾದಳ ಸಂಸ್ಥಾಪಕ ನಾ.ಸು.ಹರ್ಡೀಕರ್ ಜನ್ಮ ಜಯಂತಿ ಕಾರ್ಯಕ್ರಮ ನಡೆಯಿತು.

ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ‘ಸ್ವಾತಂತ್ಯ್ರ ಚಳವಳಿಗೆ ಯುವ ಸಮೂಹವನ್ನು ಸಂಘಟಿಸಲು ಕರ್ನಾಟಕದ ನಾ.ಸು.ಹರ್ಡೀಕರ್ ಆರಂಭಿಸಿದ ಭಾರತ ಸೇವಾದಳ ತರಬೇತಿ ಶಿಕ್ಷಣವು ಪ್ರಸ್ತುತ ಪ್ರತಿ ವಿದ್ಯಾರ್ಥಿಗೂ ಅಗತ್ಯವಾಗಿದೆ. ಸೇವಾದಳ ಶಿಕ್ಷಣವನ್ನು ಪ್ರತಿ ಶಾಲೆಯಲ್ಲಿಯೂ ಕಡ್ಡಾಯಗೊಳಿಸಬೇಕು’ ಎಂದು ಹೇಳಿದರು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ಮಾಲೂರು ತಾಲ್ಲೂಕು ಭಾರತ ಸೇವಾದಳ ಅಧ್ಯಕ್ಷ ಬಹದೂರ್ ಸಾಬ್, ಸೇವಾದಳ ಮುಖಂಡ ವಿ.ಪಿ.ಸೋಮಶೇಖರ್ ಮಾತನಾಡಿದರು.

ಮಕ್ಕಳಿಗೆ ಸಿಹಿ ವಿತರಿಸಿ, ಸರ್ವ ಧರ್ಮ ಪ್ರಾರ್ಥನೆ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಅಂತ್ಯಗೊಂಡಿತು.

ಸಂಘಟಕ ಎಂ.ಬಿ.ದಾನೇಶ್, ಸೇವಾದಳ ಪದಾಧಿಕಾರಿಗಳಾದ ಕೆ.ಜಯದೇವ್, ಮುನಿವೆಂಕಟಯಾದವ್, ರೆಡ್ಡಿ, ಜಗದೀಶ್ ಸೇರಿ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-18-1496832276

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.