ಚೇಳೂರು: ಪಟ್ಟಣದ ಸರ್ಕಾರಿ ಪ್ರೌಢಶಾಲೆ (ಈಗಿನ ಕೆ.ಪಿ.ಎಸ್.ಸಿ ಶಾಲೆ) ಆವರಣದಲ್ಲಿ 1990ನೇ ಸಾಲಿನ ಹಳೆ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡಿದ್ದ ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮ ಭಾನುವಾರ ಅತ್ಯಂತ ಸಂಭ್ರಮದಿಂದ ನಡೆಯಿತು.

ದಶಕಗಳ ನಂತರ ಒಂದೆಡೆ ಸೇರಿದ ಸಹಪಾಠಿಗಳು ಮತ್ತು ಶಿಕ್ಷಕರು ಹಳೆ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಕಳೆ ನೀಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ, ತಮಗೆ ಅಕ್ಷರ ಕಲಿಸಿ ಬದುಕನ್ನು ರೂಪಿಸಿದ ಗುರುಗಳನ್ನು ಬೆಳ್ಳಿ ರಥದಲ್ಲಿ ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಸರ್ಕಾರಿ ಆಸ್ಪತ್ರೆ, ಎಂ.ಜಿ ವೃತ್ತ ಹಾಗೂ ವೃತ್ತ ನಿರೀಕ್ಷಕರ ಕಚೇರಿ ಮಾರ್ಗವಾಗಿ ಸಾಗಿ ಶಾಲಾ ವೇದಿಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಹಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಭಕ್ತಿಪೂರ್ವಕ ಕೃತಜ್ಞತೆ ಸಲ್ಲಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಗಣ್ಯರು ಹಾಗೂ ಗುರುಗಳು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಎಸ್ಐ ಶಂಕರ್ ಚಾರಿ ಅವರು, ‘ಗುರು ಎಂದರೆ ಕೇವಲ ಪಾಠ ಹೇಳಿಕೊಡುವ ವ್ಯಕ್ತಿಯಲ್ಲ. ಅವರು ಬದುಕಿನ ದಾರಿದೀಪ. ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪವಿತ್ರವಾದುದು. ಈ ಸಮಾರಂಭ ಕೇವಲ ಒಂದು ಸಂಭ್ರಮವಲ್ಲ. ನಮ್ಮನ್ನು ಬೆಳೆಸಿದ ಗುರುಗಳಿಗೆ ನಾವು ಸಲ್ಲಿಸುತ್ತಿರುವ ಕೃತಜ್ಞತೆಯ ಸಂಕೇತವಾಗಿದೆ’ ಎಂದು ಭಾವನಾತ್ಮಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಮಾಚನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ‘ಶಾಲೆಯಲ್ಲಿ ಕಳೆದ ಸುಂದರ ಕ್ಷಣಗಳು, ಸಹಪಾಠಿಗಳೊಂದಿಗಿನ ಕೀಟಲೆ ಮತ್ತು ಗುರುಗಳು ನೀಡಿದ ಸಂಸ್ಕಾರದ ಮಾರ್ಗದರ್ಶನವೇ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರಲು ಕಾರಣ’ ಎಂದು ಹಳೆ ದಿನಗಳನ್ನು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಬಳಗವು ತಮ್ಮ ಹಿರಿಯ ಗುರುಗಳಿಗೆ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

ಹಳೆಯ ವಿದ್ಯಾರ್ಥಿಗಳಾದ ರವೀಂದ್ರ ವಿ., ಫೋಟೊ ನಾರಾಯಣ, ಟಿ.ವಿ.ಲಕ್ಷ್ಮೀನಾರಾಯಣ ಶೆಟ್ಟಿ, ಸಿ.ನಂಜುಂಡಪ್ಪ, ಎಸ್. ವೆಂಕಟಸ್ವಾಮಿ, ಮಹಮದ್ ಗೋಸ್ ಪೀರ್, ರಾಧಾಮಣಿ, ಸರಳಕುಮಾರಿ, ಶಂಕರ ಚಾರಿ, ವಿ.ರವಿ, ಜಯ ನಾಯಕ್, ಎಚ್.ಎನ್. ನಾಗರಾಜ್, ಈಶ್ವರ ರೆಡ್ಡಿ, ಚೌಡರೆಡ್ಡಿ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-16-656465329

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.