ಕೋಲಾರ: ಬೆವರು ಸುರಿಸಿ ಕಟ್ಟಿದ ಸಂಘಟನೆ ಒಡೆದು ಹೋಳಾಗಿದೆ. ತಳ ಸಮುದಾಯಗಳು ಛಿದ್ರವಾಗಿವೆ. ಹೀಗಾಗಿ, ಅಂಬೇಡ್ಕರ್ ಪ್ರಶಸ್ತಿ ನನಗೆ ಅಷ್ಟೇನೂ ಸಂತೋಷ ತಂದಿಲ್ಲ ಎಂದು ದಲಿತ ಹೋರಾಟಗಾರ ಹಾಗೂ ಪತ್ರಕರ್ತ ಸಿ.ಎಂ.ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದಿಂದ ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಪತ್ರಕರ್ತರ ಭವನದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಅಭಿಮಾನದಿಂದ ಕರೆದು ಗೌರವಿಸಿರುವುದಕ್ಕೆ ಚಿರಋಣಿ. ಆದರೆ, ನಾನೇನೂ ಸಂತೋಷದಿಂದಿಲ್ಲ. ತಳಸಮುದಾಯದಲ್ಲೇ ಒಡಕು ಉಂಟಾಗಿ ಬೇರೆ ಬೇರೆ ಆಗಿವೆ. ದಲಿತರು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿಲ್ಲ ಎಂಬ ನೋವು, ಬೇಸರವಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ‘ಮುನಿಯಪ್ಪ ಅವರಿಗೆ ಒಲಿದಿರುವ ಅಂಬೇಡ್ಕರ್ ಪ್ರಶಸ್ತಿಯು ಜಿಲ್ಲೆಯ ಎಲ್ಲರಿಗೂ ಸಂದ ಗೌರವ. ಈಗ ಸಂಘಟನೆಗಳು ಪರ, ವಿರೋಧ ಧೋರಣೆ ಹೊಂದಿವೆ. ಎಲ್ಲಾ ಸಂಘಟನೆಗಳನ್ನು ಒಂದಾಗಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಬೇಕು’ ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ‘ವಿದ್ಯಾರ್ಥಿದೆಸೆಯಲ್ಲಿಯೇ ಮುನಿಯಪ್ಪ ಹೋರಾಟದಲ್ಲಿ ತೊಡಗಿದ್ದವರು. ಚಳವಳಿಗಳಿಗೆ ಭದ್ರ ಬುನಾದಿ ಹಾಕಿದವರು. ಅವರು ಸಂಸತ್ತಿನಲ್ಲಿ ಇರಬೇಕಿತ್ತು. ಸ್ವಲ್ಪವ್ಯತ್ಯಾಸದಿಂದ ತಪ್ಪಿ ಹೋಯಿತು.ಮುಂದೆ ಅಂಥ ಅವಕಾಶ ಬರಲಿ’ ಎಂದರು.

ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್, ‘ಮುನಿಯಪ್ಪ ಜೀತಗಾರನ ಮಗನಾಗಿ ಹುಟ್ಟಿ ಜೀವನಗಾಥೆ ಬರೆದಿದ್ದಾರೆ. ಡೋಂಗಿತನ ಪ್ರದರ್ಶಿಸುವ ಜಾತಿ ಹೋರಾಟಗಾರರು ಕೆಲವರಿದ್ದಾರೆ. ಆದರೆ, ಆ ಮನೋಭಾವವನ್ನು ಮುನಿಯಪ್ಪ ಅವರಲ್ಲಿ ಕಂಡಿಲ್ಲ’ ಎಂದರು.

ಆಕ್ರಮಣಕಾರಿ ಆಗಿದ್ದವರು ನಂತರ ಮಾಗಿದ ಮುನಿಯಪ್ಪ ಆಗಿ, ಈಗ ಪಾಲಿಷ್ಡ್ ಮುನಿಯಪ್ಪ ಆಗಿ ಬದಲಾಗಿದ್ದಾರೆ. ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಬಂದಿರುವುದು ಇಡೀ ರಾಜ್ಯದ ಪತ್ರಕರ್ತರಿಗೆ ಪ್ರಶಸ್ತಿ ಬಂದಷ್ಟೇ ಖುಷಿ ಆಗಿದೆ ಎಂದು ತಿಳಿಸಿದರು.

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, 'ಮುನಿಯಪ್ಪ ಅವರ ಹೋರಾಟದಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗಿದೆ. ಸಾವಿರಾರು ಮಂದಿಗೆ ಸೂರು ಭಾಗ್ಯ ಕಲ್ಪಿಸಿದ್ದಾರೆ. ಗಾಂಧಿನಗರದ ಅವರ ನಿವಾಸ ಸಮಸ್ಯೆಗಳ ಪರಿಹಾರದ ಕೇಂದ್ರಬಿಂದು’ ಎಂದು ಶ್ಲಾಘಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್ ಮಾತನಾಡಿ, ಮುನಿಯಪ್ಪ ಅವರ ಹೋರಾಟದ ಬದುಕನ್ನು ವಿವರಿಸಿದರು. ದಲಿತ ಚಳವಳಿ, ಪತ್ರಿಕಾ ರಂಗ ಹಾಗೂ ಕೃಷಿಯಲ್ಲಿ ತೊಡಗಿ ಹೆಮ್ಮೆಯ ಸಾಧನೆಗೆ ಕಾರಣರಾಗಿದ್ದಾರೆ ಎಂದರು.

ವಿಶ್ವ ಕುಂದಾಪುರ, ಸಂಚಿಕೆ ನಾರಾಯಣಯಪ್ಪ ಮಾತನಾಡಿದರು. ಶ್ರೀನಿವಾಸಪುರ, ಮಾಲೂರು, ಕೆಜಿಎಫ್ ಪತ್ರಕರ್ತರು ಸನ್ಮಾನಿಸಿದರು. ಸಿ.ವಿ.ನಾಗರಾಜ, ಪಾ.ಶ್ರೀ ಅನಂತರಾಮು, ಸಂಘದ ಪದಾಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-18-2030363603

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.