ಕೋಲಾರ: ಡಾ.ಎಲ್ ಬಸವರಾಜು ಪ್ರತಿಷ್ಠಾನವನ್ನು ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ವಿದ್ಯುಕ್ತವಾಗಿ ವರ್ಗಾಯಿಸುವ ಸಮಾರಂಭವನ್ನು ಶನಿವಾರ ಬೆಳಿಗ್ಗೆ 10.30ಕ್ಕೆ ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದೆ.

ಪ್ರತಿಷ್ಠಾನ 26ವರ್ಷಗಳಿಂದ ಸಾಹಿತ್ಯ, ಸಂಸ್ಕೃತಿ, ಲಲಿತ ಕಲೆ, ಜಾನಪದ, ಸಂಗೀತ, ಸಿನಿಮಾ, ಸಮಾಜಸೇವೆ, ಶಿಕ್ಷಣ, ಸಂಶೋಧನೆ, ಪರಿಸರ, ರಂಗಭೂಮಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಪ್ರತಿವರ್ಷ ಡಾ.ಎಲ್.ಬಸವರಾಜು ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.

ಪ್ರಸ್ತುತ ಪ್ರತಿಷ್ಠಾನದ ಬಹುತೇಕ ಸದಸ್ಯರು ಹಿರಿಯ ನಾಗರಿಕರಾಗಿದ್ದು, ಕೋಲಾರದಿಂದ ಹೊರಗೆ ವಾಸಿಸುತ್ತಿದ್ದಾರೆ. ಪ್ರತಿಷ್ಠಾನದ ಕಾರ್ಯ ಕಲಾಪಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಟ್ರಸ್ಟ್ನ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಅದರ ಕಾರ್ಯಕಲಾಪಗಳನ್ನು ಸುಸೂತ್ರವಾಗಿ ಮುಂದುವರಿಸಿಕೊಂಡು ಹೋಗಲು ಆದಿಮಕ್ಕೆ ಇಡಿಯಾಗಿ ವರ್ಗಾಯಿಸಲು ಡಾ.ಎಲ್.ಬಸವರಾಜು ಟ್ರಸ್ಟ್ ಸಭೆ ತೀರ್ಮಾನಿಸಿರುತ್ತದೆ. ಟ್ರಸ್ಟ್ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಟ್ರಸ್ಟಿನ ಮಹಾ ಪೋಷಕರಾದ ವಿಶಾಲಾಕ್ಷಿ ಬಸವರಾಜು ತಮ್ಮ ಒಪ್ಪಿಗೆ ಸೂಚಿಸಿರುತ್ತಾರೆ. ಇದೇ ಮೇರೆಗೆ ಪ್ರತಿಷ್ಠಾನದಲ್ಲಿರುವ ₹ 4,51,000 ನಿಧಿಯನ್ನು ಷರತ್ತುಗಳಿಗೊಳಪಟ್ಟು ಆದಿಮಕ್ಕೆ ವರ್ಗಾಯಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-18-1442964662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.