ಕೋಲಾರ: ಶೈಕ್ಷಣಿಕ ವರ್ಷಕ್ಕೆ ಅಗತ್ಯವಾದ ಪಠ್ಯಪುಸ್ತಕಗಳನ್ನು ಶಾಲಾರಂಭಕ್ಕೂ ಮುನ್ನವೇ ಶಾಲಾ ಶಿಕ್ಷಣ ಇಲಾಖೆಯಿಂದ ಶೇ 85 ರಷ್ಟು ಸರಬರಾಜು ಮಾಡಲಾಗಿದೆ. 100ಕ್ಕೂ ಹೆಚ್ಚು ಶೀರ್ಷಿಕೆಗಳ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗುತ್ತಿದೆ ಎಂದು ತಾಲ್ಲೂಕು ನೋಡಲ್ ಅಧಿಕಾರಿಗಳಾದ ಪಿ.ಲೇಖಾ ಹಾಗೂ ಎಂ.ಬಿ.ಮಂಜುನಾಥ್ ತಿಳಿಸಿದರು.

ಮೇ 29 ರಂದು ಶೈಕ್ಷಣಿಕ ವರ್ಷ ಪ್ರಾರಂಭಗೊಳ್ಳುತ್ತಿದ್ದು, ಪಠ್ಯ ಪುಸ್ತಕಗಳ ಸರಬರಾಜು ಗೋದಾಮಿನಲ್ಲಿ ಶಾಲೆಗಳಿಗೆ ಪುಸ್ತಕ ಹಸ್ತಾಂತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಉಮಾ ಹಾಗೂ ಪಠ್ಯಪುಸ್ತಕ ವಿತರಣೆ ಜಿಲ್ಲಾ ನೋಡಲ್ ಅಧಿಕಾರಿ ಸಮೀವುಲ್ಲ ಮಾರ್ಗದರ್ಶನದಲ್ಲಿ ಸರಬರಾಜಾಗಿದ್ದ ಎಲ್ಲಾ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದರು.

ಜಿಲ್ಲೆಯ ಸರ್ಕಾರಿ, ಅನುದಾನಿತ ಶಾಲೆಗಳಿಂದ ಸ್ಟೂಡೆಂಟ್ ಟ್ರ್ಯಾಕಿಂಗ್ ಸಿಸ್ಟಮ್(ಸ್ಯಾಟ್ಸ್) ಆಧರಿಸಿ ಇಂಡೆಂಟ್ ನೀಡಲಾಗಿತ್ತು. ಖಾಸಗಿ ಶಾಲೆಗಳು ನಿಗದಿತ ದರ ಪಾವತಿಸಿರುವಂತೆ ಪುಸ್ತಕಗಳು ಸರಬರಾಜಾಗುತ್ತಿವೆ. ಉಳಿದಂತೆ ಬಾಕಿ ಇರುವ ಪುಸ್ತಕಗಳು ಸರಬರಾಜಾಗಬೇಕಾಗಿದ್ದು, ಅವುಗಳನ್ನು ತಕ್ಷಣ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದೇ ಮೊದಲ ಬಾರಿ 1ರಿಂದ 5ನೇ ತರಗತಿವರೆಗೆ ಪಠ್ಯಪುಸ್ತಕಗಳಲ್ಲಿ ಕನ್ನಡ, ಇಂಗ್ಲೀಷ್ ಎರಡೂ ಮಾಧ್ಯಮಗಳಲ್ಲಿ ಮುದ್ರಿಸಿ ನೀಡಲಾಗಿದೆ. ಉರ್ದು ಮಾಧ್ಯಮ ಮಕ್ಕಳಿಗೆ ಉರ್ದು, ಇಂಗ್ಲೀಷ್ನಲ್ಲಿ ಮುದ್ರಿಸಿ ಸರಬರಾಜು ಮಾಡಿದ್ದು, ವಿತರಿಸಲಾಗಿದೆ ಎಂದರು.

ಪ್ರತಿ ವರ್ಷ ಶಾಲಾ ದಿನಚರಿ ಇಡೀ 1ರಿಂದ 10ನೇ ತರಗತಿಗೂ ಒಂದೇ ಇರುತ್ತಿತ್ತು. ಆದರೆ ಈ ಬಾರಿ ತರಗತಿವಾರು ಪ್ರತ್ಯೇಕ ದಿನಚರಿಗಳನ್ನು ವಿತರಿಸಲು ಕ್ರಮವಹಿಸಲಾಗಿದೆ ಎಂದು ವಿವರಿಸಿದರು.

ಕೆಲವು ತರಗತಿಗಳ ವರ್ಕ್ ಪುಸ್ತಕಗಳು ಸೇರಿದಂತೆ ಕೆಲವು ಮಾತ್ರ ಇನ್ನೂ ಬರಬೇಕಿದ್ದು, ಅವು ಸಹ ಈ ವಾರದಲ್ಲೇ ಪೂರೈಕೆಯಾಗಲಿದೆ ಎಂದು ತಿಳಿಸಿದರು.

ಶಿಕ್ಷಣ ಸಂಯೋಜಕ ಎಂ.ಬಿ.ಮಂಜುನಾಥ್ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೂ ಬೇಡಿಕೆಗೆ ತಕ್ಕಂತೆ ಪುಸ್ತಕಗಳ ದಾಸ್ತಾನು ಮಾಡಲಾಗಿದೆ, ಯಾವುದೇ ಶಾಲೆಗೆ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಿರುವುದಾಗಿ ಹೇಳಿದರು.

ಶಾಲೆಗೆ ಈಗಾಗಲೇ ತಲುಪಿರುವ ಪುಸ್ತಕಗಳನ್ನು ಹಾಳಾಗದಂತೆ ಸುರಕ್ಷಿತವಾಗಿ ಸಂಗ್ರಹಿಸಿ, ಮುಂದಿನ ಶೈಕ್ಷಣಿಕ ವರ್ಷದ ಆರಂಭದ ದಿನದಂದೇ ಮಕ್ಕಳಿಗೆ ವಿತರಿಸುವಂತೆ ಕೋರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-18-1466391694

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.